ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನುಮದಿನದ ಶುಭಾಶಯ ಕೋರಲಾಯಿತು.
ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭ ಕೋರಲಾಯಿತು.
ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಅಧ್ಯಕ್ಷ ಪ್ರದೀಪ್ ಕೃಷ್ಣೇಗೌಡ, ಮಹೇಶ್, ಸಿದ್ದರಾಮನ ಹುಂಡಿ ಶ್ರೀನಿವಾಸ್, ಹರೀಶ್, ನಾಗರಾಜು, ಚಂದ್ರಶೇಖರ್ ಮತ್ತಿತರರು ನಿಖಿಲ್ ಅವರಿಗೆ ಶುಭ ಕೋರಿದರು.
