ಮೈಸೂರು: ಜಿಲ್ಲೆಯ ಕೆ.ಆರ್.ನಗರದ ಶ್ರೀ ಮಾತೃಶ್ರೀ ವೃದ್ಧಾಶ್ರಮ ಮತ್ತು ಬುದ್ಧಿಮಾಂಧ್ಯ – ಮಂದಮತಿ ಮಹಿಳೆಯರ ಆಶ್ರಮಕ್ಕೆ
ಅಭ್ಯುದಯ (ಕೇಶವ ಕೃಪಾ ಸಂವರ್ಧನಾ ಸಮಿತಿ) ವತಿಯಿಂದ ಶ್ರೀ ವೆಲ್ ನೆಸ್ ಕಿಟ್ & ವಾಕರ್ ವಿತರಿಸಲಾಯಿತು.
ಅಭ್ಯುದಯ ವತಿಯಿಂದ ಮನೀಶ್, ಸತೀಶ್ , ಪ್ರಮೋದ್ ಮತ್ತು ಕಾರ್ಯಕರ್ತರು ಹಾಗೂ
ಶ್ರೀ ಮಾತೃಶ್ರೀ ವೃದ್ಧಾಶ್ರಮದ ಕಾರ್ಯದರ್ಶಿ ಮಂಜುನಾಥ ಕೆ ಜಿ,ಲಕ್ಷ್ಮೀದೇವಿ ಕೌಟುಂಬಿಕ ಸಲಹೆಗಾರರು,ನಟರಾಜು, ಮಿಥುನ್ ಕುಮಾರ್ ಮತ್ತು ಸಿಬ್ಬಂದಿ ಹಾಜರಿದ್ದರು.
ಅಭ್ಯುದಯ’ ಯೋಜನೆಯು 2004ರಲ್ಲಿ 12 ವಿದ್ಯಾರ್ಥಿಗಳೊಂದಿಗೆ ತನ್ನ ಮೊದಲ ‘ಉಚಿತ ಕಲಿಕಾ ಕೇಂದ್ರ’ವನ್ನು ಪ್ರಾರಂಭಿಸಿತು. ಪ್ರಸ್ತುತ, ಅಭ್ಯುದಯವು ದೇಶದ ಹಲವು ರಾಜ್ಯಗಳ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ 180ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳ ಮೂಲಕ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುತ್ತಿದೆ.
ಅಭ್ಯುದಯದ ಎಲ್ಲಾ ಸೇವಾ ಚಟುವಟಿಕೆಗಳು ಸಂಪೂರ್ಣ ಉಚಿತವಾಗಿದ್ದು, ಇವು ಜೀವನ ಕೌಶಲ್ಯಗಳು, ಮೌಲ್ಯಾಧಾರಿತ ಸಮಗ್ರ ಶಿಕ್ಷಣ, STEM ಶಿಕ್ಷಣ, ಡಿಜಿಟಲ್ ಸಾಕ್ಷರತೆ, ಹಾಗೂ ಆರೋಗ್ಯ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಒಳಗೊಂಡಿವೆ.
ಈ ಮೂಲಕ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 17 ಗುರಿಗಳ ಪೈಕಿ 14 ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಅಭ್ಯುದಯ ಕಾರ್ಯನಿರ್ವಹಿಸುತ್ತಿದೆ.
ಸಮಾಜ ಮತ್ತು ದೇಶದ ಸಮೃದ್ಧಿಗಾಗಿ, ಮಹಿಳಾ ಸಬಲೀಕರಣ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಪ್ರಮುಖ ಆದ್ಯತೆಗಳಾಗಿವೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳು ಹಾಗೂ ಸಮುದಾಯಗಳು ನಮ್ಮ ಗಮನದ ಕೇಂದ್ರಬಿಂದುವಾಗಿವೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.
