ನೇಪಾಳ: ನೇಪಾಳದಲ್ಲಿ ಭಾರತೀಯ ಯಾತ್ರಾರ್ತಿಗಳಿದ್ದ ಬಸ್ ಪರ್ವತ ಪ್ರದೇಶದಲ್ಲಿ ಉರುಳಿಬುದ್ದು ಏಳು ಮಂದಿ ಮೃತಪಟ್ಟಿದ್ದಾರೆ.
ಮನಕಾಮನಾ ದೇವಸ್ಥಾನದಿಂದ ಹಿಂದಿರುಗುವಾಗ ಭಾರತೀಯರಿದ್ದ ಬಸ್ ರಸ್ತೆಯಿಂದ ಇಳಿಜಾರಿನ ಪ್ರದೇಶಕ್ಕೆ ಉರುಳಿಬಿದ್ದಿದೆ.
ಮುತ್ತುಕುಮಾರ್ (58), ಅನಾಮಾಲಿಕ್ (58), ಮೀನಾಕ್ಷಿ (59), ಶಿವಗಾಮಿ (53), ವಿಜಯಲ್ (57), ಮೀನಾ (58) ಮತ್ತು ತಮಿಳರಸಿ (60) ಎಂದು ಗುರುತಿಸಲಾಗಿದೆ.
ನೇಪಾಳದ ಗೂರ್ಖಾ ಶಾಹಿದ್ ಲಖನ್ ಗ್ರಾಮೀಣ ಪುರಸಭೆ -3 ರ ಕಾಂಟಾರ್ ಪ್ರದೇಶದಲ್ಲಿ ಮಿನಿಬಸ್ ಅಪಘಾತವಾಗಿದೆ.
ಮನಕಾಮನಾ ದೇವಾಲಯದ ರಿಂದ ಮಜುವಾ ಕಡೆಗೆ ಬರುತ್ತಿದ್ದ ಮೈಕ್ರೋಬಸ್ ರಸ್ತೆಯಿಂದ ಸುಮಾರು 200 ಮೀಟರ್ ದೂರಕ್ಕೆ ಉರುಳಿಬಿದ್ದಿದೆ. ಬಸ್ಸಿನಲ್ಲಿ 16 ಮಂದಿ ಪ್ರಯಾಣಿಸುತ್ತಿದ್ದರು.ಮೃತ ಏಳು ಮಂದಿಯೂ ಭಾರತೀಯ ಯಾತ್ರಿಗಳು.
7 ಜನ ಗಾಯಗೊಂಡಿದ್ದು ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ.
