ಮೈಸೂರು: ಮೈಸೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಯೂತ್ ಮೋಟಿವೇಶನ್ ಟೀಮ್ ನವರು ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರನ್ನು ಭೇಟಿ ಮಾಡಿ ನಶಾ ಮುಕ್ತ ಭಾರತ ಕುರಿತು ಚರ್ಚಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಯೂತ್ ಮೋಟಿವೇಶನ್ ಟೀಮ್ ವತಿಯಿಂದ ಮಾದಕ ವಸ್ತುಗಳು ಮತ್ತು ನಶಾ ಮುಕ್ತ ಭಾರತ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸದರು.
ಈ ವೇಳೆ ಟೀಮ್ ಈ ಉತ್ತಮ ಸಾಮಾಜಿಕ ಕೆಲಸಕ್ಕೆ ಅಪರ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಟೀಮ್ ಸ್ಥಾಪಕರೂ,ಕಾರ್ಯದರ್ಶಿ ರಾಘವೇಂದ್ರ ಡಿ, ಉಪಾಧ್ಯಕ್ಷರುಗಳಾದ, ಸುನಿಲ್ ಕುಮಾರ್, ತ್ಯಾಗರಾಜ್, ಪರಶಿವ, ವಿಜಯಕುಮಾರ್ ಶಾದನಹಳ್ಳಿ , ಯೋಗೇಶ್ ಸಾಲುಂಡಿ ಮತ್ತಿತರರು ಹಾಜರಿದ್ದರು.
ಉದ್ಯಾನವನಗಳ ಪ್ರವೇಶ ಶುಲ್ಕ ಬೇಡ:
ಇದೇ ವೇಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ಯೂತ್ ಮೋಟಿವೇಶನ್ ಟೀಮ್ ವತಿಯಿಂದ ಮೈಸೂರು ಅಪರ ಜಿಲ್ಲಾಧಿಕಾರಿಗಳಿಗೆ ನಗರದ ಯಾವುದೇ ಉದ್ಯಾನವನಗಳ ಪ್ರವೇಶ ಶುಲ್ಕ ತೆಗೆದುಕೊಳ್ಳಬಾರದು ಎಂದು ಡಿ.ರಾಘವೇಂದ್ರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
