ಮೈಸೂರು: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು
ಸೌಮ್ಯ ಕೆ ಅವರಿಗೆ ಪಿ. ಎಚ್ ಡಿ ಪದವಿ ನೀಡಿದೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ
ಇಂಗ್ಲಿಷ್ ಅಧ್ಯಯನ ವಿಭಾಗದ
ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ.ಜಿ.ಕೆ ಅವರ ಮಾರ್ಗದರ್ಶನದಲ್ಲಿ ಸೌಮ್ಯ ಕೆ ಅವರು ಸಲ್ಲಿಸಿದ, ನರೇಟಿಂಗ್ ಸೆಲ್ಸ್ : ಆಂಡಸ್ವಾಡಿಂಗ್ ದ ಪೆಮಿನಿಸಂ ಇನ್ ದ ಸೆಲೆಕ್ಸ್ ದಲಿತ್ ವಿಮೆನ್ಸ್ ರೈಟಿಂಗ್ಸ್ ಎಂಬ ಮಹಾ ಪ್ರಬಂಧಕ್ಕೆ ಈ ವಿಶ್ವವಿದ್ಯಾನಿಲಯ
ಡಾಕ್ಟರೆಟ್ ಪದವಿ ನೀಡಿದೆ.
ಮುಂದಿನ ಶೈಕ್ಷಣಿಕ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ.
ಸೌಮ್ಯ ಅವರು ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ
14 ವರ್ಷಗಳು ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೌಮ್ಯ ಅವರ ಪತಿ ಸಹಪ್ರಾಧ್ಯಾಪಕ ಗೋವಿಂದರಾಜು ಅವರು
ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
