ಮೈಸೂರು: ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಮೈಸೂರಿನ ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ಗಾನ ಸಿರಿ ವೇದಾಂತ ಲಾಹಿರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಕೃಷ್ಣರಾಜ ಕ್ಷೇತ್ರದ ವಿಪ್ರ ಮುಖಂಡರು,ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ತಿನ ಕರ್ನಾಟಕದ ರಾಜ್ಯದಕ್ಷರಾದ ಏನ್.ಎಂ.ನವೀನ್ ಕುಮಾರ್,ಪಂಡಿತ್ ಶ್ರೀ ಕಲ್ಲಾಪುರ ಪವಮಾನಾಚಾರ್ಯ,ಉತ್ತರಾದಿ ಮಠದ ವ್ಯವಸ್ಥಾಪಕರಾದ ಅನಿರುದ್ಧಾಚಾರ್ಯ ಪಾಂಡುರಂಗಿ,ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ರವಿಕುಮಾರ್,ಶರದವಿಲಾಸ ಸಂಸ್ಥೆಯ ಕಾರ್ಯದರ್ಶಿ ನರಸಿಂಹನ್,ಖ್ಯಾತ ವೈದರಾದ ಪೂರ್ಣಿಮಾ ಕೃಷ್ಣಮೂರ್ತಿ,ಮುಖಂಡರಾದ ಎಸ್ ರಾಮಪ್ರಸಾದ್,ಲಯನ್ ಗುರುರಾಜ್,
ವಿಪ್ರ ಮುಖಂಡರಾದ ಎಸ್.ಬಿ.ವಾಸುದೇವ ಮೂರ್ತಿ ,ಆರ್.ಎಸ್.ಸತ್ಯನಾರಾಯಣ ಉದ್ಘಾಟಿಸಿದರು.
ಕಾರ್ಯಕ್ರಮವು ಫೆ 9 ರವರೆಗೂ ಮುಂದುವರೆಯಲಿದ್ದು,ಪ್ರತಿ ದಿನ ಸಂಜೆ 5 ರಿಂದ 8.30 ರ ವರೆಗೆ ಇಬ್ಬರು ಗಾಯಕರಿಂದ ಗಾನಾಮೃತ ಕಾರ್ಯಕ್ರಮ ಮತ್ತು ಒಬ್ಬರು ವಿದ್ವಾಂಸರಿಂದ ಜ್ಞಾನಾಮೃತ ಪ್ರವಚನದ ವ್ಯವಸ್ಥೆ ಇರುತ್ತದೆ.
ಮೈಸೂರಿನ ಆಸಕ್ತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಎನ್.ಎಂ.ನವೀನ್ ಕುಮಾರ್ ಮನವಿ ಮಾಡಿದ್ದಾರೆ.
