ಮೈಸೂರು: ಸಾಧನೆ ಎಂಬುದಕ್ಕೆ ಯಾವುದೇ ಗಡಿ ಇಲ್ಲ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ. ಸಾಧನೆಗೆ ಯಾವುದೇ ವೈಪಲ್ಯ ಅಡ್ಡಿ ಇಲ್ಲ ಎಂಬುದನ್ನು ಮೈಸೂರಿನ ವಿಶೇಷ ಚೇತನ ಕ್ರೀಡಾ ಪಟು ಅಲೋಕ್ ಆರ್.ಜೈನ್ ಸಾಧನೆ ಮಾಡಿ ಸಾಂಸ್ಕೃತಿಕ ನಗರಿಯ ಕೀರ್ತಿ ಹೆಚ್ಚಿಸಿದ್ದಾರೆ.
ಸಿದ್ಧಾರ್ಥನಗರ ನಿವಾಸಿ,ವಿಶೇಷ ಚೇತನರಾದ ಅಲೋಕ್ ಆರ್.ಜೈನ್ ಈಗ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ್ದಾರೆ.
ನೆದರ್ ಲ್ಯಾಂಡ್ಸ್ ನ ನಾರ್ವೆಯಲ್ಲಿ ಪೂಲ್ ಅಸೋಸಿಯೇಷನ್ ನ 3ನೇ ಅಂತಾರಾಷ್ಟ್ರೀಯ ಪ್ಯಾರಾ ವಿಶೇಷಚೇತನರ ಹೇ ಬಾಲ್ ಪಂದ್ಯಾವಳಿಯಲ್ಲಿ ದೇಶದ ಮೂವರು ವಿಶೇಷಚೇತನ ಕ್ರೀಡಾಪಟುಗಳು ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇದರಲ್ಲಿ ಮೈಸೂರಿನ ಅಲೋಕ್ ಸಹ ಒಬ್ಬರು.
ಕೆಎಂ ಪಿಕೆ ಟ್ರಸ್ಟ್ ಸಹ ಇವರ ಸಾಧನೆಗೆ ಹೆಮ್ಮೆ ಪಟ್ಡು ಪ್ರಶಸ್ತಿ ಪಡೆದು ಬರುವಂತೆ ಸನ್ಮಾನಿಸಿ ಶುಭ ಹಾರೈಸಿದ್ದಾರೆ.
ಈ ಕುರಿತು ಸಂತಸ ಹಂಚಿಕೊಂಡಿರುವ ಆಲೋಕ್ ಆರ್.ಜೈನ್, ವಿಕಲಚೇತನ ಎನ್ನುವುದು ಶಾಪವಲ್ಲ, ಅದು ನಮ್ಮಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಒಂದು ಉತ್ತಮ ಅವಕಾಶ ಎಂದು ಆತ್ಮವಿಶ್ವಾಸವಿಡಬೇಕು ಎಂದು ಹೇಳಿದರು.
ಗುರಿ ತಲುಪಲು ಆಸೆ ಇದ್ದರೆ ಸಾಲದು. ಆಸಕ್ತಿ, ನಿರಂತರ ಅಭ್ಯಾಸ, ಏಕಾಗ್ರತೆ ಮುಖ್ಯ. ವಿಶೇಷಚೇತನರೂ ಅಂತರಾಷ್ಟ್ರೀಯ ಕ್ರೀಡೆ, ಪಂದ್ಯಾವಳಿಯಲ್ಲಿ ಹೆಚ್ಚಾಗಿ ಭಾಗವಹಿಸಲು ಸರ್ಕಾರದ ಸಹಕಾರ ಅತ್ಯಗತ್ಯವಿದೆ ಆಗ ವಿಶೇಷಚೇತನರಿಗೆ ನಿಜಕ್ಕೂ ದೈರ್ಯ ತುಂಬಿದಂತೆ ಆಗಲಿದೆ ಎಂದು ಮನವಿ ಮಾಡಿದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಬೇರೆ ದೇಶಗಳಲ್ಲಿ ಕ್ರೀಡಾ ಪಟುಗಳಿಗೆ ಹೆಚ್ಚಿನ ಸಹಕಾರವಿದೆ. ಆದರೆ ಆರ್ ಸಿ ಬಿ, ಮಹಿಳಾ ಕ್ರಿಕೆಟ್, ಒಲಂಪಿಕ್ ಸೇರಿ ಇಂತಹ ವಿಶೇಷಚೇತನರೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ತೋರುತ್ತಿದ್ದಾರೆ. ಅಂತಹವರಿಗೆ ಸರ್ಕಾರ ಬೆಂಬಲವಾಗಿ ನಿಂತರೆ ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ಸಿಕ್ಕಂತೆ ಆಗಲಿದೆ ಎಂದು ತಿಳಿಸಿದರು.
ಅಲೋಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಮೈಸೂರಿನ ಕೀರ್ತಿ ಹೆಚ್ಚಿಸಲಿ ಎಂದು ಗೆಳೆಯರೆಲ್ಲರೂ ಶುಭ ಕೋರಿದ್ದೇವೆ ಎಂದರು.
ಈ ವೇಳೆ ನಿರೂಪಕ ಅಜಯ್ ಶಾಸ್ತ್ರಿ, ಸಂದೇಶ್,ಅಮಿತ್ ,ಚೇತನ್ ,ಸುಹಾಸ್, ರಿತೇಶ್, ಯಶವಂತ್ ,ವಿಶಾಲ್ ,ಅರ್ಜುನ್, ನಿಶಾಂತ್ ಮತ್ತಿತರರು ಉಪಸ್ಥಿತರಿದ್ದು,ಅಲೋಕ್ ಅವರಿಗೆ ಶುಭ ಹಾರೈಸಿದರು.
