ಮೈಸೂರು: ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಭಕ್ತವೃಂದದಿಂದ ಈ ಶತಮಾನ ಕಂಡ ಕಾಯಕಯೋಗಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಯವರ ಭಕ್ತಿ ಸ್ಮರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಭಕ್ತವೃಂದ ಪುಷ್ಪ ನಮನ ಸಲ್ಲಿಸಿ ಭಕ್ತಿಯಿಂದ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಭಕ್ತವೃಂದದ ದೀಪು ಕೆ ಆರ್, ರಜನೀಶ್,ತ್ರಿಶೂಲ್,ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಗಿರೀಶ್, ರಾಜು, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಎಸ್ ಎನ್ ರಾಜೇಶ್, ದೂರ ರಾಜಣ್ಣ, ಸತ್ಯಾನಂದ ವಿಟ್ಟು, ರಾಕೇಶ್, ಬಸವರಾಜ್, ಅಭಿಲಾಶ್, ಮತ್ತಿತರರು ಹಾಜರಿದ್ದರು.
