ಮೈಸೂರು: ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಆಗಸ್ಟ್ 1 ರಂದು ವಿವೇಕ ಸ್ಮಾರಕ ವನ್ನು ಉದ್ಘಾಟಿಸಲು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯ
ಎಂದು ಹಿಂದು ಸಂಘಟನೆಗಳ ಒಕ್ಕೂಟದ
ಸಂದೇಶ್ ತಿಳಿಸಿದ್ದಾರೆ.
ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರೀತಿಸುವ ದೂಡ್ಡ ವರ್ಗವೆ ಇದೆ, ಮೊನ್ನೆ ಅವರು ಲೈವ್ ಗೆ ಬಂದು ಮಾತನಾಡಿದ್ದು ಫೇಸ್ ಬುಕ್, ಯೂಟುಬ್, ಇನ್ಸ್ಟ ಗಳಲ್ಲಿ 45 ಕೋಟಿ ವೀಕ್ಷಣೆ ಪಡೆದಿರುವುದು ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ.
2013 ರ ಅವರ ಚುನಾವಣ ಗೆಲುವಿಗೆ ಪಕ್ಷತೀತವಾಗಿ ಹಲವಾರು ಸಂಘಟನೆಗಳು ಸಂಸ್ಥೆಗಳು ವ್ಯಕ್ತಿಗಳು ಶ್ರಮಿಸಿದ್ದಾರೆ, ಅವರ ಚುನಾವಣ ಗೆಲುವಿನ ನಂತರ ಮೈಸೂರಿಗೆ ಆಗಮಿಸಿದ್ದು ಮುಖ್ಯವಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಅವರನ್ನು ಭೇಟಿ ಮಾಡಿರುತ್ತಾರೆ, ಅವರ ಭೇಟಿಯ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ, ಆದ್ದರಿಂದ ಭಾಜಪ ಮುಖಂಡರು ಕಾರ್ಯಕರ್ತರು ಒಂದಕ್ಕಿಂತ ಹೆಚ್ಚು ಬಾರಿ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿರುವ ಪಕ್ಷದ ಮಖಂಡರು ಪಕ್ಷದ ಸ್ವಯಂ ಘೋಷಿತ ಶಿಷ್ಠಚಾರ ವನ್ನು ಬದಿಗಿಟ್ಟು ಯಾವುದೆ ಫಲಾಪೇಕ್ಷೆ ಇಲ್ಲದೆ ದೇಶಕ್ಕಾಗಿ ಧರ್ಮಕ್ಕಾಗಿ ನಿಸ್ವರ್ಥವಾಗಿ ಶ್ರಮಿಸುತ್ತಿರುವ ಹಿಂದು ಸಂಘಟನೆಯ ಕಾರ್ಯಕರ್ತರಿಗೆ ಪ್ರಧಾನ ಮಂತ್ರಿಯವರನ್ನು ಕಾಣುವ ಅವಕಾಶ ಮಾಡಿಕೂಡಬೇಕೆಂದು
ಪಕ್ಷದ ರಾಜ್ಯದ ಅಧ್ಯಕ್ಷರಿಗೆ ಸಂದೇಶ್ ಮನವಿ ಮಾಡಿದ್ದಾರೆ.
