format: 0; filter: 2205; fileterIntensity: 1.0; filterMask: 0; captureOrientation: 0; runfunc: 16; algolist: 0; isCameraSense: false; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 1; delta:1; bokeh:1; module: photo;hw-remosaic: false;touch: (-1.0, -1.0);sceneMode: 13107200;cct_value: 0;AI_Scene: (-1, -1);aec_lux: 171.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 37;zeissColor: film;
ಮೈಸೂರು: ಮೈಸೂರಿನ ಕೆ ಆರ್ ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಲ್ಲಿಕಾರ್ಜುನ ಸ್ವಾಮಿ ಅವರು 32 ವರ್ಷಗಳ ಕಾಲ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳವರು ಸನ್ಮಾನಿಸಿ ಗೌರವಿಸಿದರು
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ
ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್,
ಮೈಸೂರು ನಗರದಲ್ಲಿ ವಾಹನ ಸವಾರರಿಗೆ ಚಿರಪರಿಚಿತರಾಗಿರುವ ಮಲ್ಲಿಕಾರ್ಜುನ ಸ್ವಾಮಿ ಅವರು, ಯಾರೇ ಎದುರಾದರೂ ನಗುಮುಖದಿಂದ “ಗುರುಗಳೇ” ಅಥವಾ “ಅಪ್ಪಾಜಿ” ಎಂದು ಅಕ್ಕರೆಯಿಂದ ಸಂಬೋಧಿಸುತ್ತಾರೆ. ಅವರ ಸರಳತೆ, ಆತ್ಮೀಯತೆ ಮತ್ತು ಸ್ನೇಹಪರ ನಡೆ ಎಲ್ಲರ ಮನ ಗೆದ್ದಿದೆ ಎಂದು ಹೇಳಿದರು.
ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ಅವರು ಮಾತನಾಡಿ,
ಸುದೀರ್ಘ ಸೇವಾ ಜೀವನದ ನಂತರ ನಿವೃತ್ತಿಯ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಮಲ್ಲಿಕಾರ್ಜುನ ಸ್ವಾಮಿ ಅವರ ನಿವೃತ್ತ ಜೀವನವು ಸುಖ, ಶಾಂತಿ, ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.
ಅವರು ಇದೇ ಪ್ರೀತಿ, ಗೌರವ ಮತ್ತು ಆತ್ಮೀಯತೆಯನ್ನು ಎಲ್ಲರಿಂದಲೂ ಪಡೆಯುತ್ತಾ ನೆಮ್ಮದಿಯ ಬದುಕನ್ನು ನಡೆಸಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿ ರಾಘವೇಂದ್ರ, ಓಂಕಾರ್ ಆನಂದ್,ವರುಣ ಮಹಾದೇವ್, ಗೋಬಿ ನಾಗ, ಸುಬ್ರಹ್ಮಣ್ಯ, ಎಸ್.ಎನ್ ರಾಜೇಶ್, ದಿನೇಶ್, ಕೃಷ್ಣಪ್ಪ (ಗಂಟಯ್ಯ), ಲೋಕೇಶ್, ಸುನಿಲ್, ಕಾರ್ತಿಕ್ ಮತ್ತಿತರರು ಹಾಜರಿದ್ದರು.
