ಮೈಸೂರು: ನಗರದ ವಿಪ್ರ ಜಾಗೃತಿ ವೇದಿಕೆ ವತಿಯಿಂದ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ಸೋಮವಾರ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಉಚಿತ ಸಾಮೂಹಿಕ ಉಪನಯನ ಹಮ್ಮಿಕೊಳ್ಳಲಾಯಿತು,
ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ 10.15 ಗಂಟೆಗೆ ಬ್ರಹ್ಮೋಪದೇಶ ನೆರವೇರಿಸಲಾಯಿತು.
ನಂತರ ವಟುಗಳಿಂದ ಶೋಭಾ ಯಾತ್ರೆ ಮತ್ತು ಅಶ್ವತ್ಥ ಪೂಜೆ ನೆರೆವೇರಿಸಲಾಯಿತು.
ಬ್ರಹ್ಮೋಪದೇಶ ಉಪನಯನ ಉದ್ದೇಶಿಸಿ ಮಾತನಾಡಿದ ಮುಡಾ ಮಾಜಿ ಅಧ್ಯಕ್ಷರಾದ ಹಚ್ ವಿ ರಾಜೀವ್ ತ್ರಿಮತಸ್ಥ ವಿಪ್ರ ಸಮುದಾಯದವರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ವಿಪ್ರ ಜಾಗೃತಿ ವೇದಿಕೆ ವತಿಯಿಂದ ಈ ಉಚಿತ ಉಪನಯನ ನಡೆಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.
ವೇದವೆಂದರೆ ಜ್ಞಾನ, ಸಂಸ್ಕೃತಿ, ಪರಂಪರೆಗೆ ಸಾಕ್ಷಿ. ಭಾರತ ಮಾತ್ರವಲ್ಲ; ವಿಶ್ವಮಟ್ಟದಲ್ಲೂ ಮಾನ್ಯತೆ ಗಳಿಸಿದೆ. ವೇದ ಮಂತ್ರಗಳು ವ್ಯಕ್ತಿ ಜೀವನದ ಸಮಗ್ರ ಚಿತ್ರವನ್ನು ನೀಡಬಲ್ಲವು ಎಂದು ರಾಜೀವ್ ಹೇಳಿದರು.
ನಂತರ ಶಾಸಕ ಟಿ ಎಸ್ ಶ್ರೀವತ್ಸ ಆಗಮಿಸಿ ವಟುಗಳಿಗೆ ಶುಭ ಹಾರೈಸಿದರು.
ವಿದ್ವಾನ್ ವೆಂಕಟೇಶ್ ಅವಧಾನಿ
ಅವರು ನೂತನ ವಟುಗಳಿಗೆ ಮಾರ್ಗದರ್ಶನ ನೀಡಿ, ಉಪನಯನದ ಮಹತ್ವ
ತಿಳಿಸಿಕೊಟ್ಟರು.
ವಿಪ್ರ ಮುಖಂಡರಾದ ಭವಾನಿ ಶಂಕರ್,
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ,
ವಿಪ್ರ ಜಾಗೃತಿ ವೇದಿಕೆ ಉಪಾಧ್ಯಕ್ಷೆ
ಪ್ರಭ ,ಕಾರ್ಯದರ್ಶಿ ಮುಳ್ಳೂರು ಸುರೇಶ ,ಖಜಾಂಜಿ ಮಂಜುನಾಥ್ ,ಸಹ ಕಾರ್ಯದರ್ಶಿ ಮುರ್ಗೆಶ್, ರಮಾ, ಸುಮಾ, ಅಂಬಿಕಾ, ನಂಧಿನಿ, ಸುಧ, ಪ್ರೇಮಾ, ರೂಪ, ಸುನಿಲ್, ಶ್ರೀಕಾಂತ್, ಲತಾ, ಮಾಧವ, ಮಂಜುನಾಥ್, ಮುಕುಂದ, ಆನಂದ್ ಹಾಗೂ ವಟುಗಳ ಪೋಷಕರು ಹಾಜರಿದ್ದರು.
