ಮೈಸೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾಜಿ ಉಪ ಕುಲಸಚಿವ ಎಂ. ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ಮಂಜುನಾಥ್ಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಮೈಸೂರಿನ ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ ಇಬ್ಬರಿಗೂ ತಲಾ 2.5 ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ದಂಡ ವಿಧಿಸಿದೆ.
ಉಪ ಕುಲಸಚಿವರಾಗಿದ್ದ ವೇಳೆ ಕೃಷ್ಣಮೂರ್ತಿ, ಮಂಜುನಾಥ್ ಜೊತೆಗೂಡಿ ವಿವಿಯಲ್ಲಿ ಎಫ್ಡಿಎ ಮತ್ತು ಎಸ್ಡಿಎ ಹುದ್ದೆ ಕೊಡಿಸುವುದಾಗಿ 8 ಲಕ್ಷ ರೂ ಪಡೆದು ವಂಚಿಸಿದ್ದರು.
ಕೆಲವರ ದೂರು ಆಧರಿಸಿ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎ.ಜಿ. ಶಿಲ್ಪ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಕೆ. ಪ್ರಕಾಶ ವಾದ ಮಂಡಿಸಿದರು.
