ಮೈಸೂರು: ಮೈಸೂರಿನಲ್ಲಿ
ಹಳೆಯ ವಸ್ತು ಸಂಗ್ರಹಿಸಿದ್ದ ಗೋದಾಮಿನಲ್ಲಿ ಬೆಂಕಿ ಹತ್ತಿಕೊಂಡಿದ್ದು,ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮೈಸೂರು ಬೆಂಗಳೂರು ರಸ್ತೆ, ಹಳೇ ಕೇಸರೆಯ ನಾಲ್ಕು ಗೋದಾಮುಗಳು ಬೆಂಕಿಗೆ ಆಹುತಿಯಾಗಿದೆ.
ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದ್ದು,ಗೋದಾಮಿನಲ್ಲಿದ್ದ ಹಳೆಯ ವಸ್ತುಗಳು ಸುಟ್ಟು ನಾಶವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ
ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಮೈಸೂರಿನ ಎನ್.ಆರ್ ಪೊಲೀಸರು ಪರಿಶೀಲಿಸಿದರು.
