ಮೈಸೂರು: ಕಾರ್ಮಿಕರ ದಿನಾಚರಣೆ ಅಂಗವಾಗಿ ಅಪೂರ್ವ ಸ್ನೇಹ ಬಳಗ ಹಾಗೂ ರಂಗ ರಾವ್ ಅಂಡ್ ಸನ್ಸ್ ವತಿಯಿಂದ ಪೌರಕಾರ್ಮಿಕರನ್ನು ಸತ್ಕರಿಸುವ ಮೂಲಕ ಮಾಧರಿಯಾಗಿದ್ದಾರೆ.
ಮೈಸೂರಿನ ಚಾಮುಂಡಿಪುರಂಮ್ ನಲ್ಲಿ
ಅಪೂರ್ವ ಸ್ನೇಹ ಬಳಗ ಹಾಗೂ ರಂಗ ರಾವ್ ಅಂಡ್ ಸನ್ಸ್ ವತಿಯಿಂದ ಪೌರಕಾರ್ಮಿಕರಿಗೆ
ಈ ಬಾರಿ ಬೀಸಲು ಹೆಚ್ಚಿರುವ ಹಿನ್ನೆಲೆಯಲ್ಲಿ
ತಲೆಗೆ ಟೋಪಿ ಹಾಗೂ ಟೀ, ಬನ್, ಬಾಳೇಹಣ್ಣು ನೀಡುವ ಮೂಲಕ ಸತ್ಕರಿಸಿ ಕಾರ್ಮಿಕರ ದಿನಾಚರಣೆ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು, ನಗರದ ಕಸ ತೆಗೆದು ಪರಿಸರವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿರುವ ಪೌರ ಕಾರ್ಮಿಕರ ಸೇವೆ ಸ್ಮರಣೀಯ ಎಂದು ಹೇಳಿದರು.
ಕಾರ್ಮಿಕರು ಈ ದೇಶದ ನಿಜವಾದ ಸೇವಕರು, ಮೈಸೂರು ನಗರದಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವೆಲ್ಲೂ ಏಳುವ ಮುನ್ನವೇ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ನಮಗೆ ಸುಂದರ ಪರಿಸರವನ್ನು ನೀಡುವ ನಿಜವಾದ ಪರಿಸರವಾದಿಗಳು ಪೌರಕಾರ್ಮಿಕರು ಎಂದು ಶ್ಲಾಘಿಸಿದರು.
ಅವರು ಒಂದು ದಿನ ಸ್ವಚ್ಛಗೊಳಿಸುವುದನ್ನು ನಿಲ್ಲಿಸಿದರೆ ಇಡೀ ಪರಿಸರವೇ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ ಇಡೀ ನಗರ ಗಬ್ಬೆದ್ದುಹೋಗುತ್ತದೆ. ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಇದ್ದು ಇದರ ಬಗ್ಗೆ ಸರ್ಕಾರ ಗಮನಿಸಬೇಕು ಎಂದು ನಾರಸಯಣಗೌಡ ಒತ್ತಾಯಿಸಿದರು.
ಪೌರ ಕಾರ್ಮಿಕರು ಅಂದರೆ ಸಮಾಜದ ಅತ್ಯಂತ ಕೆಳ ಮಟ್ಟದ ಸಮುದಾಯ ಎಂಬ ಮಾತು ಇತ್ತು ಆದರೆ ಈಗ ಆ ಮಾತು ಇಲ್ಲ, ಅವರು ಸಹ ಅತ್ಯುತ್ತಮ ಜೀವನಮಟ್ಟ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುತ್ತಿದ್ದಾರೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ,ಅಪೂರ್ವ ಸುರೇಶ್,ರಂಗ ರಾವ್ ಅಂಡ್ ಸನ್ಸ್ ನ ಸುರೇಶ್,ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್,ಉದ್ಯಮಿ ಜಯರಾಮ್,ಆರೋಗ್ಯಾಧಿಕಾರಿ ಶಿವಪ್ರಸಾದ್,ದೂರ ರಾಜಣ್ಣ, ಆನಂದ, ಮೈ ಲಾ ವಿಜಯ್ ಕುಮಾರ್,ಜತ್ತಿ ಪ್ರಸಾದ್ ,ಶಿವಲಿಂಗ ಸ್ವಾಮಿ ಮತ್ತಿತರರು ಹಾಜರಿದ್ದರು.
