ಮೈಸೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಎರಡು ದಿನ ಹಮ್ಮಿಕೊಂಡಿದ್ದ ವಾರ್ಷಿಕ ಮೈಸಿರಿ ಸಂಭ್ರಮ-2026 ವಿಶಿಷ್ಟವಾಗಿ ನೆರವೇರಿತು.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಖುಷಿ ಪಟ್ಡರು.
ವಿಶೇಷವಾಗಿ ನೃತ್ಯ, ಫ್ಯಾಷನ್ ವಾಕ್ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಏಪ್ರಿಲ್ 18ರಂದು ಬೆಳಗಿನಿಂದಲೇ ವಿವಿಧ ಮನರಂಜನಾ ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮಗಳು ಜರುಗಿದವು.
ಪೆಟ್ ಶೋ, ಮ್ಯೂಸಿಕಲ್ ಚೇರ್ ಹಾಗೂ ಟ್ರೆಷರ್ ಹಂಟ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಿತು.
ಪೆಟ್ ಶೋನಲ್ಲಿ ಹಲವು ವಿಧದ ಸಾಕುಪ್ರಾಣಿಗಳನ್ನು ಪ್ರದರ್ಶಿಸಲಾಯಿತು. ವಿಶೇಷವಾಗಿ ದೇಶಿ ತಳಿ ಹಳ್ಳಿಕಾರ್ ಗೋವುಗಳು ಹಾಗೂ ವಿವಿಧ ಜಾತಿಯ ನಾಯಿಗಳು ಎಲ್ಲರ ಗಮನ ಸೆಳೆದವು.
ಇದೇ ದಿನ ರಾತ್ರಿ 8 ಗಂಟೆಗೆ ನಡೆದ ಮುಖ್ಯ ಸಮಾರಂಭವನ್ನು ಖ್ಯಾತ ನಟಿ ರಾಗುಣಿ ದ್ವುವೇದಿ ಅವರು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಈ ವೇಳೆ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿ, ಇಂತಹ ವೇದಿಕೆಗಳು ಯುವಜನತೆಗೆ ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು.
ಈ ಉತ್ಸವವು ವಿದ್ಯಾರ್ಥಿಗಳ ಸೃಜನಾತ್ಮಕತೆ ಮತ್ತು ಸಾಮರ್ಥ್ಯವನ್ನು ಹೊರಹಾಕುವ ವೇದಿಕೆಯಾಗಿದ್ದು, ಭಾಗವಹಿಸಿದ ಎಲ್ಲರಿಗೂ ಮರೆಯಲಾಗದ ಅನುಭವವನ್ನು ನೀಡಿತು.
ಸಮಾರಂಭದಲ್ಲಿ ಕಾಲೇಜಿನ ಅದ್ಯಕ್ಷರು ಶಿವಪ್ಪ , ಕಾರ್ಯದರ್ಶಿ ಮಂಜುನಾಥ , ಟ್ರೆಶರರ್ ಪೂರ್ಣಿಮಾ , ಟ್ರಸ್ಟಿ ಗಣಪತಿ , ಕಾಂಗ್ರೆಸ್ ಯುವ ಮುಖಂಡರು ಮಹಾಪ್ರಸಾದ್ ಕಿಟ್ಟಿ , ಮಿಸೆಸ್ ಇಂಡಿಯಾ ರನ್ನರ್ ಅಪ್ ಖುಶಿ ವಿನು , ಚಿರಾಯು ಮಂಜೇಶ್ , ಪ್ರಭು ಸ್ವಾಮಿ , ಅಕ್ಷಯ್ , ಸುಧಾಕರ್ , ಜಾನಕಿ ರೆಡ್ಡಿ ,ಎಂಎಂ ಗ್ರೂಪ್ ಸಂಸ್ಥಾಪಕ ಮಹಾನ್ ಶ್ರೇಯಸ್ ಮತ್ತಿತರರು ಪಾಲ್ಗೊಂಡಿದ್ದರು.

