ಕೊಳ್ಳೇಗಾಲ: ಇದೇ ಜೂ. 8 ರ ಸೋಮವಾರ ಸತ್ತೇಗಾಲ ವಿ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯ ಹಮ್ಮಿಕೊಂಡಿದ್ದು,ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
66/11 ಕೆ.ವಿ ವಿ.ವಿ. ಕೇಂದ್ರ ಸತ್ತೇಗಾಲದಿಂದ ಹೊರಹೊಮ್ಮುವ 11 ಕೆವಿ ಫೀಡರ್ಗಳಾದ
ಪಾಳ್ಯ ಐ.ಪಿ, ಉಗನಿಯ ಎನ್.ಜೆ.ವೈ, ಸತ್ತೇಗಾಲ ಐ.ಪಿ, ಯಡಕುರಿಯ ಎನ್.ಜೆ.ವೈ, ಧನಗೆರೆ ಐ.ಪಿ, ಗುಂಡೇಗಾಲ ಎನ್.ಜೆ.ವೈ, ಸಿ.ಪಿ ದೊಡ್ಡಿ ಐ.ಪಿ, ಶಾಂತಿನಗರ ಐ.ಪಿ ಮತ್ತು ಬೆಳಕವಾಡಿ ಫೀಡರ್ಗಳಿಗೆ ವಿದ್ಯುತ್ ನಿಲುಗಡೆ ಮಾಡುವುದರಿಂದ ಈ ಫೀಡರ್ಗಳಿಗೆ ಒಳಪಡುವ ಗ್ರಾಮಗಳಾದ ಪಾಳ್ಯ, ಸಿ.ಪಿ ದೊಡ್ಡಿ, ಸತ್ತೇಗಾಲ, ಧನಗೆರೆ, ಗುಂಡೇಗಾಲ, ಉಗನಿಯ, ಯಡಕುರಿಯ, ಸರಗುರು, ಜಿನಕನಹಳ್ಳಿ, ಚೆಲುವನಹಳ್ಳಿ, ನರೀಪುರ, ಅಗ್ರಹಾರ, ಶಿವನಸಮುದ್ರ, ಹ್ಯಾಂಡ್ಪೋಸ್ಟ್, ಜಾಗೇರಿ, ಶಾಂತಿನಗರ, ಹಳೇಕೋಟೆ, ಚನ್ನಿಪುರ ದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ 8 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಎಂದಿನಂತೆ ಗ್ರಾಹಕರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಜೊತೆ ಸಹಕರಿಸಬೇಕೆಂದು ಚಾವಿಸನಿನಿ, ಕೊಳ್ಳೇಗಾಲ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಎಂ ಸುರೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
