ಮೈಸೂರು: ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ತಮ್ಮ ಮಾನಕ್ಕೆ ಹೆದರಿ ನ್ಯಾಯಾಲಯದ ಮೊರೆ ಹೋಗಿರುತ್ತಾರೆ. ಮಾನವಂತರಿಗೆ ಅವಮಾನ ಸಹಿಸಿಕೊಳ್ಳುವುದು ಕಷ್ಟ,ಆದ್ದರಿಂದ ನ್ಯಾಯಾಲಯಕ್ಕೆ ಹೋಗುತ್ತಾರೆ ಎಂದು ಹೇಳಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ಹೇಳಿಕೆ ನೀಡುತ್ತಿರುವವರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಸತ್ಯವನ್ನು ಮುಚ್ಚಿಡುವುದೂ ಅಪರಾಧ. ಸುಮ್ಮನೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು,ದಿನಾ ಸ್ಟಿಂಗ್ ಆಪರೇಷನ್ ಎಂಬ ರಬ್ಬರ್ ಎಳೆಯಬಾರದು. ಸಾಕ್ಷಿಗಳಿದ್ದರೆ ಬಿಡುಗಡೆ ಮಾಡಲಿ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇಂದು ರಾಜಕಾರಣ ಮಾಡುವುದೇ ಕಷ್ಟವಾಗಿದೆ. ಎಲ್ಲಿ ಯಾವ ಕ್ಯಾಮರಾ ಇರುತ್ತದೆ ಎಂಬುದೇ ಗೊತ್ತಾಗದ ಸ್ಥಿತಿ ಬಂದಿದೆ. ಇದು ರಾಜಕಾರಣದ ಕೆಟ್ಟ ಕಾಲ. ಶಾಸಕರು ಕೂಡಾ ಮನುಷ್ಯರೇ, ಮೇಲಿಂದ ಇಳಿದು ಬಂದವರಲ್ಲ. ಕೆಲವರು ಅಧಿಕಾರಕ್ಕಾಗಿ ಮತ್ತೊಬ್ಬರ ಚಾರಿತ್ರ್ಯಹರಣ ಮಾಡಲು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ನನಗೆ ಇಂತಹ ಅಭ್ಯಾಸವಿಲ್ಲ, ಈ ವಿದ್ಯೆಯನ್ನು ಕಲಿತಿಲ್ಲ. ಈ ಸ್ಟಿಂಗ್ ಆಪರೇಷನ್ ವಿಚಾರವನ್ನು ಬಲವಾಗಿ ಖಂಡಿಸುತ್ತೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.
ದೆಹಲಿ ಪ್ರತಿಭಟನೆಯಲ್ಲಿ ಸಿಎಂ ಮತ್ತು ಡಿಸಿಎಂ ಎಳೆದಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಡೆಯಲು ಕಷ್ಟಪಡುತ್ತಿದ್ದರು. ಅಲ್ಲಿ ಯುವ ಸಮೂಹ ದೊಡ್ಡ ಸಂಖ್ಯೆಯಲ್ಲಿ ಸೇರಿತ್ತು. ಆ ಸಂದರ್ಭದಲ್ಲಿ ತಳ್ಳಾಟ, ನೂಕಾಟ ಆಗಿದೆ. ಪ್ರತಿಭಟನೆಯಲ್ಲಿ ಸಿಎಂ ಭಾಗಿಯಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಎಸ್ಐಆರ್ ವಿರುದ್ಧ ದೇಶದ ಹಿತಕ್ಕಾಗಿ ಸಿಎಂ ಪ್ರತಿಭಟನೆಗೆ ಹೋಗಿದ್ದಾರೆ. ಇಲ್ಲಿ ಯಾರು ಯಾರಿಗೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಕ್ಷಮೆ ಕೇಳುವುದಿದ್ದರೆ ಯಾರು ಯಾವ ಕಾರಣಕ್ಕೆ ಯಾರಿಗೆ ಕ್ಷಮೆ ಕೇಳಬೇಕು ಎಂಬ ಪಟ್ಟಿಯನ್ನೇ ಮಾಡಿಕೊಡುತ್ತೇನೆ. ಆಮೇಲೆ ಸರಣಿಯಾಗಿ ಕ್ಷಮೆ ಕೇಳುವ ಕಾರ್ಯಕ್ರಮವನ್ನೇ ಮಾಡೋಣ ಎಂದು ತನ್ವೀರ್ ಸೇಠ್ ಮಾರ್ಮಿಕವ
