ಪಿರಿಯಾಪಟ್ಟಣ: ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪಿರಿಯಾಪಟ್ಟಣ ಪ್ರವಾಸಿ ಮಂದಿರದಲ್ಲಿ ಸದಸ್ಯರ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಘಟಕದ ಅಧ್ಯಕ್ಷರಾದ ಮಾದೇವ್ ಪಿ ಎಂ ಅವರು ಮಾತನಾಡಿ, ರೈತ ಸಂಘ ಹಸಿರು ಸೇನೆ ರಾರಾಜಿಸುತ್ತಿದೆ ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸೇರಬೇಕೆಂದು ಮನವಿ ಮಾಡಿದರು.
ರಾಜ್ಯ ಯುವ ಘಟಕದ ಅಧ್ಯಕ್ಷರಾದ ಕೋಮಲಪುರ ಸ್ವಾಮಿ ಗೌಡ್ರು ಮಾತನಾಡಿ, ಯುವ ಮುಖಂಡರು ಮುಂದಿನ ಹಂತದಲ್ಲಿ ಸಂಘದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ಸೌಲತ್ತುಗಳನ್ನು ರೈತ ಮುಖಂಡರು ಪಡೆಯಬೇಕಾದರೆ ಸಂಘಕ್ಕೆ ಸೇರಲೇಬೇಕು ಎಂದು ತಿಳಿಹೇಳಿದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಮಹಿಳಾ ಘಟಕದ ಅಧ್ಯಕ್ಷರಾದ ಕಾವೇರಮ್ಮ ದೇವಶೆಟ್ಟಿ, ಉಪಾಧ್ಯಕ್ಷ ಪ್ರಭು, ಸಂಚಾಲಕ ಮೋಹನ್, ಕೊಣಸೂರು ಶಿವರಾಜ್, ನಾಗೇಂದ್ರ, ವಿಶ್ವನಾಥ್, ಪ್ರಕಾಶ್, ಮಹೇಶ್ ಮತ್ತಿತರರು ಹಾಜರಿದ್ದರು.
