ಮೈಸೂರು: ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣ ವ್ಯಾಪ್ತಿಯ ಕೋರ್ಟ್ ಆವರಣದಲ್ಲಿ ಮನುಷ್ಯನ ಕಾಲು ಸಿಕ್ಕಿದ್ದು,ಕೆಲ ಕಾಲ ಆತಂಕ ಮೂಡಿಸಿತ್ತು.
ನಂತರ ಗೊಂದಲ,ಆತಂಕ ಬಗೆಹರಿದಿದೆ.
ಕೋರ್ಟ್ ಪಕ್ಕದಲ್ಲೇ ರೈಲ್ವೆ ಗೇಟ್ ಇದ್ದು ರೈಲ್ವೆ ಆಕ್ಸಿಡೆಂಟ್ ನಲ್ಲಿ ಮೃತರಾಗಿದ್ದ ಯಾರದ್ದೊ ಕಾಲನ್ನು ನಾಯಿ ಎತ್ತಿ ತಂದು ಕೋರ್ಟ್ ಆವರಣದಲ್ಲಿ ಬಿಸಾಕಿದೆ ಎಂದು ಸ್ಪಷ್ಟಪಡಿಸಲಾಗಿದೆ.
ರೈಲ್ವೆ ಪೊಲೀಸರು ಕಾಲನ್ನು ತೆಗೆದುಕೊಂಡು ಹೋಗಿ ಪರಿಶೀಲಿಸಿ, ಅಪಘಾತದ ದೇಹವನ್ನು ಪತ್ತೆ ಹಚ್ಚಿ,ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
