ಮೈಸೂರು: ಮೈಸೂರಿನ ಅಗ್ರಹಾರದ ನವಗ್ರಹ ದೇವಾಲಯದಲ್ಲಿರುವ ಪಾರ್ವತಿ ದೇವಿಗೆ ಮಾಗಮಾಸದ ಶುಕ್ರವಾರ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ ಮಾಡಲಾಯಿತು.
ಅಮ್ಮನಿಗೆ ಸೇವಂತಿಗೆ, ಕನಕಾಂಬರ ಮತ್ತಿತರ ಹೂಗಳಿಂದ ಪೂಜಿಸಲಾಯಿತು.ತಾಯಿ ಕೇಸರಿ ಬಣ್ಣದ ಸೀರೆಯಲ್ಲಿ ಸರ್ವಾಭರಣ ಭೂಶಿತಳಾಗಿ ಕಂಗೊಳಿಸುತ್ತಿದ್ದಾಳೆ.
ಇಂದು ವಸಂತ ಪಂಚಮಿಯೂ ಇದೆ,ಜತೆಗೆ ಮಾಗಮಾಸದ ಶುಕ್ರವಾರ,ತಂಗ್ಗೆ ದುರ್ಗಾಪರಮೇಶ್ವರಿ ಉತ್ಸವಾನೂ ಇದೆ. ಹಾಗಾಗಿ ದೇವಾಲಯದ ಶಿವಾರ್ಚಕರಾದ ಎಸ್.ಯೋಗಾನಂದ್ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಿದರು.
ಈ ವೇಳೆ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
