ಮೈಸೂರು: ಕೋಟ್ಯಾಂತರ ಹಣ ದುರುಪಯೋಗ ಹಾಗೂ ಕರ್ತವ್ಯ ಲೋಪ ಆರೋಪದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ
ಆತಗೂರು ಗ್ರಾಮ ಪಂಚಾಯ್ತಿ ಪಿಡಿಒ ಎ.ಬಿ.ಶಶಿಧರ್ ಅವರನ್ನು ಅಮಾನತು ಮಾಡಲಾಗಿದೆ.
ಉಪ ಲೋಕಾಯುಕ್ತರ ಮದ್ದೂರು ಭೇಟಿ ಹಿನ್ನೆಲೆಯಲ್ಲಿ ಈ ಪಿಡಿಒ ತಲೆದಂಡವಾಗಿದೆ.
15ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆ ಆರೋಪ
ಎ.ಬಿ.ಶಶಿಧರ್ ಮೇಲಿದ್ದು, ಜಿಪಂ ಸಿಇಒ ಕೆ.ಆರ್.ನಂದಿನಿ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.
ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಲಾಗಿದೆ.
ಪಿಡಿಒ ಶಶಿಧರ್ ಅಕ್ರಮಗಳ ಸಂಬಂಧ ಬಗ್ಗೆ ತಾಲೂಕು ಪಂಚಾಯ್ತಿ ಇಒ ತನಿಖಾ ವರದಿ ಸಲ್ಲಿಸಿದ್ದರು.
ಈ ಹಿಂದೆ ಹಲಗೂರು ಪಿಡಿಒ ಆಗಿದ್ದಾಗಲೂ ಹಣ ದುರುಪಯೋಗ, ಕರ್ತವ್ಯಲೋಪ ಆರೋಪದಡಿ ಶಶಿಧರ್ ಅವರನ್ನು
ಅಮಾನತ್ತಾಗಿದ್ದರು.
ಸರ್ಕಾರಿ ಅಧಿಕಾರಿಯಾಗಿದ್ದರೂ ನಿಯಮಗಳನ್ನ ಉಲ್ಲಂಘಿಸಿ
ರೀಲ್ಸ್ ಗಳಲ್ಲಿ ಸ್ಟಾರ್ ಆಗಿಯೂ ಮಿಂಚಿದ್ದರು.
ಸರ್ಕಾರಿ ಅಧಿಕಾರಿ.ಖಾಸಗಿ ಬೌನ್ಸರ್ಸ್, ಹೊಸ ವಾಹನ ಖರೀದಿ, ಶಾರ್ಟ್ ಮೂವಿ, ಲಾಂಗ್, ಸಿಗರೇಟ್ ಹಿಡಿದು ರೀಲ್ಸ್ ಗಳನ್ನ ಮಾಡಿದ್ದರು.
ಸರ್ಕಾರಿ ಅಧಿಕಾರಿ ಎಂಬುದನ್ನು ಮರೆತು ಕಾನೂನುಬಾಹಿರವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಮಿಂಚುತ್ತಿದ್ದ ಪಿಡಿಒ ಶಶಿಧರ್ ಕಡೆಗೂ ಸಸ್ಪೆಂಡ್ ಆಗಿದ್ದಾರೆ.
