ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿ
ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಏಳು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ.
ಕಾವೇರಿ ಕಂಪನಿಗೆ ಸೇರಿದ ಬಂಡೆಯಲ್ಲಿ ಇಂದು ಬೆಳಗ್ಗೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗಲೇ ಬಂಡೆ ಕುಸಿದಿದೆ.
ಕಾರ್ಮಿಕರ ಮೇಲೆ ಬಂಡೆ ಉರುಳಿ 7 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ತಾವರೆಕೆರೆ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ಕಲ್ಲು ಕ್ವಾರಿಯಲ್ಲಿ 100 ಅಡಿಯ ಮೇಲ್ಬಾಗದಲ್ಲಿ ಹಿಟಾಚಿಯಿಂದ ಕ್ಲೀನ್ ಮಾಡಲಾಗುತ್ತಿತ್ತು.
ಹೊಸ ಕ್ರಷರ್ ನಡೆಸಲು ಹಿಟಾಚಿ ಡ್ರೈವರ್ ಸ್ಥಳ ಕ್ಲೀನ್ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಈ ವೇಳೆ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.ಆಗ ಬಂಡೆ ಅವರ ಮೇಲೆಯೇ ಉರುಳಿ ಈ ಅವಘಡ ಸಂಭವಿಸಿದೆ.
