ಮೈಸೂರು: ದಸರಾ ಮಹೋತ್ಸವ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ಕೂಷ್ಮಾಂಡಾದೇವಿ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ತಾಯಿ ಪಾರ್ವತಿ ಕಡು ನೀಲಿ ಬಣ್ಣದ ಉಡುಗೆಯಲ್ಲಿ ರುದ್ರರಮಣೀಯಳಾಗಿ ಆಸೀನರಾಗಿ ಭಕ್ತರಿಗೆ ಆಶೀರ್ವಾದ ನೀಡುತ್ತಿದ್ದಾಳೆ.
ಕುಷ್ಮಾಂಡಾ ರೀತಿ ಅಲಂಕಾರಗೊಂಡು ಆಭರಣಗಳು, ಬೆಳ್ಳಿ ಕೈಗಳು,ಬೆಳ್ಳಿ ವಸ್ತುಗಳಿಂದ ಅಮ್ಮ ಕಂಗಳಿಸುತ್ತಿದ್ದಾಳೆ.
ತಾಯಿ ಪಾರ್ವತಿ ದೇವಿಯನ್ನು ಕೂಷ್ಮಾಂಡಾದೇವಿ ಅಲಂಕಾರದಲ್ಲಿ ದೇವಾಲಯದ ಪ್ರಧಾನ ಅರ್ಚಕ ಎಸ್ ಯೋಗಾನಂದ ಅವರ ಪತ್ರ ಅಭಿನಂದನ್ ಅವರು ಸಿಂಗರಿಸಿದ್ದಾರೆ.
ವಿವಿಧ ಹೂಗಳಿಂದ ಅಲಂಕರಿಸಿ ರಾತ್ರಿ ಮಹಾಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು. ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ ತಾಯಿಯನ್ನು ಕಣ್ತುಂಬಿ ಕೊಂಡು ಪೂಜೆ ಸಲ್ಲಿಸಿದರು.
