ಮೈಸೂರು: ಮೈಸೂರಿನ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ ಲಯನ್ ಕ್ಲಬ್ ಆಫ್ ಮೈಸೂರು ಎಲೆಟ್ ವತಿಯಿಂದ ವಾಕರ್ ಹಾಗೂ ವಾಕಿಂಗ್ ಸ್ಟಿಕ್ ನೀಡಲಾಯಿತು.
ಬುದವಾರ ಸಂಜೆ ಲಯನ್ ಕ್ಲಬ್ ಆಫ್ ಮೈಸೂರು ಎಲೆಟ್ ಪದಾಧಿಕಾರಿಗಳು ಆಗಮಿಸಿ,ಪಿ ಜಿ ಆರ್ ಎಸ್ ಎಸ್ ಆಶ್ರಮದ ನಿರಾಶ್ರಿತರಿಗೆ ನಾಲ್ಕು ವಾಕರ್ ಮತ್ತು ನಾಲ್ಕು ವಾಕಿಂಗ್ ಸ್ಟಿಕ್ ಗಳನ್ನು ನೀಡಿದರು.
ಈ ವೇಳೆ ಲ. ಚಂದ್ರಶೇಖರ,ಲ. ಹೇಮಂತ್,
ಲ. ಸುರೇಶ ಬಿ.ಕೆ,ಲ. ಅಭಿಜೀತ್,
ಲ.ಕಮಲ ತುಳಸಿ,ಲ. ಮೇಟಿ,
ಲ. ಉಮಾಪತಿ,ಲ. ದರ್ಶನ್ ಅವರುಗಳ ಸಮಕ್ಷಮದಲ್ಲಿ ವಾಕರ್,ವಾಕಿಂಗ್ ಸ್ಟಿಕ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ತಾಯಂದಿರ ಆಶೀರ್ವಾದದೊಂದಿಗೆ ಲಯನ್ ಕ್ಲಬ್ ಆಫ್ ಮೈಸೂರು ಎಲೆಟ್ ಪದಾಧಿಕಾರಿಗಳನ್ನು
ಸಲ್ಲಿಸಲಾಯಿತು.
