ಮೈಸೂರು: ದಸರಾ ಮಹೋತ್ಸವ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ಸಿದ್ಧಿದಾತ್ರಿ ಮಾತಾ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ತಾಯಿ ಪಾರ್ವತಿ ಕಡುಕೆಂಪು ಮತ್ತು ತಿಳಿನೇರಳೆ ಬಣ್ಣದ ಸೀರೆಉಟ್ಟು ಸೌಮ್ಯ ಮೂರ್ತಿಯಾಗಿ ಅಲಂಕೃತಗೊಂಡು ಎಲ್ಲರನ್ನೂ ಆಶೀರ್ವದಿಸಿದ್ದಾಳೆ.
ತಾಯಿ ಪಾರ್ವತಿ ದೇವಿಯನ್ನು ದೇವಾಲಯದ ಪ್ರಧಾನ ಅರ್ಚಕ ಎಸ್ ಯೋಗಾನಂದ ಅವರ ಪತ್ರ ಅಭಿನಂದನ್ ಅವರು ಸಿದ್ಧಿದಾತ್ರಿ ಅವತಾರದಲ್ಲಿ ಸಿಂಗರಿಸಿ,ಮಹಾಪೂಜೆ ನೆರವೇರಿಸಿದರು.
ವಿವಿಧ ಹೂಗಳು,ಚಿನ್ನಬೆಳ್ಳಿ ಆಭರಣಗಳು,ಕೈಕಾಲುಗಳನ್ನು ಧರಿಸಿ,ತ್ರಿಶೂಲಧಾರಿಯಾಗಿ ವಿಶೇಷವಾಗಿ ಅಲಂಕರಿಸಿ ರಾತ್ರಿ ಮಹಾಪೂಜೆ ಮತ್ತು ಮಹಾಮಂಗಳಾರತಿ ಮಾಡಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
