ಹಿರೀಸಾವೆ: ತಾನು ಹುಟ್ಟಿದ ಊರಿನ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೃಷ್ಣ ಹೆಗ್ಗಡೆ ಇಂದು ನಿಧನ ಹೊಂದಿದ್ದಾರೆ.
ಹಿರೀಸಾವೆ ಹೋಬಳಿಯ ಚೆನ್ನೇನಹಳ್ಳಿ ಗ್ರಾಮದ ಕೃಷ್ಣ ಹೆಗ್ಗಡೆ ಅವರಿಗೆ 75 ವರ್ಷ ವಯಸ್ಸಾಗಿತ್ತು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಕೃಷ್ಣ ಹೆಗ್ಗಡೆ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇಳಿವಯಸಿನಲ್ಲೂ ಅವರು ಊರ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಜೊತೆಗೆ ಗ್ರಾಮದ ಮಾರಮ್ಮನ ಗುಡಿ ಅಭಿವೃದ್ಧಿಗೆ ಜೀರ್ಣೋದ್ಧಾರಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದರು.
ಚೆನ್ನೆನಹಳ್ಳಿಯ ಸ್ವಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
