ಮೈಸೂರು: ಕೃಷ್ಣರಾಜ ಕ್ಷೇತ್ರದ ಮಹಿಳಾ ಮೋರ್ಚಾ ವತಿಯಿಂದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹುಟ್ಟು ಹಬ್ಬದ ಪ್ರಯುಕ್ತ
ಚಾಮುಂಡಿಪುರಂನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಲಾಯಿತು.
ಕೃಷ್ಣರಾಜ ಕ್ಷೇತ್ರದ ಮಹಿಳಾ ಮೋರ್ಚಾ
ಅಧ್ಯಕ್ಷೆ ಸರ್ವಮಂಗಳ
ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ನಂತರ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಗೋಪಾಲ ರಾಜ್ ಅರಸ್,
ಪ್ರಧಾನ ಕಾರ್ಯದರ್ಶಿ ರೂಪ,
ವಿದ್ಯಾ ಅರಸ್, ಬಿಜೆಪಿ ಮುಖಂಡರಾದ ಚಂದ್ರಕಲಾ, ನಾಗಶ್ರೀ.ಜಯಂತಿ,ವೀಣಾ, ಕುಮಾರಿ,ಸುವರ್ಣ,ಮೀನ ಮತ್ತಿತರರು ಹಾಜರಿದ್ದರು.
