ಮೈಸೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೌಂಡೇಶನ್ ವತಿಯಿಂದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ನಮ್ಮ ಸಂಘವು ಮೈಸೂರು ಸೇರಿದಂತೆ ಭಾರತದ್ಯಂತ ಇದ್ದು, ಪುರೋಹಿತರು, ಅರ್ಚಕರು, ಪಾಕ ತಜ್ಞರು ಎಲ್ಲರೂ ಸೇರಿ 8 ಲಕ್ಷ ಜನರಿದ್ದು ನಮಗಾಗಿ ಸರ್ಕಾರ ಪ್ರತ್ಯೇಕ ಮಂಡಳಿ ರಚನೆ ಮಾಡಬೇಕೆಂದು ಕೋರಿದರು.
ಆ ಮಂಡಳಿಗೆ ನಮ್ಮ ಸಂಘದ ರಾಜ್ಯಾಧ್ಯಕ್ಷರಾದ ಡಾ. ಜೆ ಶ್ರೀನಿವಾಸ ಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ, ಸತೀಶ್ ಸಿಂಹ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳು, ತಹಸಿಲ್ದಾರ್ ಹಾಗೂ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ವೇದ ಬ್ರಹ್ಮ ಶ್ರೀ ಎನ್ ಲಕ್ಷ್ಮೀಶ, ಅಧ್ಯಕ್ಷ ವಿದ್ವಾನ್ ಸಂತೋಷ್ ಕುಮಾರ್ ದೇಶಿಕ್, ಉಪಾಧ್ಯಕ್ಷ ಎಮ್ ವಿ ಗಣೇಶ, ಪ್ರಧಾನ ಕಾರ್ಯದರ್ಶಿ ರವಿಶಂಕರ್, ಪದಾಧಿಕಾರಿ ಗಳಾದ ಧನುಷ್ ಪಿ, ಪ್ರಸನ್ನ ಕುಮಾರ್, ಮುರಾರಿ ಭಟ್, ಕೆ ವಿ ಸುರೇಶ್, ಭಾಸ್ಕರ್, ಸುಬ್ರಮಣ್ಯ ಹಾಗೂ ಸದಸ್ಯರು ಹಾಜರಿದ್ದರು.
