(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಳೆದ ಐದಾರು ತಿಂಗಳಿಂದ ಗೈರು ಹಾಜರಿಯಾಗಿ ಬ್ಯಾಂಕ್ ವ್ಯವಹಾರಕ್ಕೆ ತೊಡಕುಂಟಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸಮ್ಮುದಲ್ಲಿ ಅಲ್ಮೇರ, ಲಾಕರ್ ಗಳ ಬೀಗ ತೆಗೆದು ಬ್ಯಾಂಕ್ ನ ಆಡಳಿತ ಮಂಡಳಿಯ ವಶಕ್ಕೆ ಪಡೆಯಲಾಯಿತು.
ಕಳೆದ ಐದಾರು ತಿಂಗಳಿಂದ ಸತತ ಗೈರಾಗಿದ್ದ ಇಲ್ಲಿನ ಸಿಇಒ ನಾಗರಾಜು ಅವರು ರೈತರ ಒತ್ತಡದಿಂದ ಮೂರ್ನಾಲ್ಕು ಬಾರಿ ಕರ್ತವ್ಯಕ್ಕೆ ಹಾಜರಾಗಿದ್ದರು ಆದರೆ ಕಳೆದ ಎರಡು ತಿಂಗಳಿಂದೀಚೆಗೆ ಕಡ್ಡಾಯವಾಗಿ ಗೈರಾಗಿದ್ದಾರೆ.
ಮುಂದಿನ ವ್ಯವಹಾರದ ದೃಷ್ಟಿಯಿಂದ
ಈ ವಿಚಾರವನ್ನು ಬ್ಯಾಂಕ್ ಆಡಳಿತ ಮಂಡಳಿ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ದಾಖಲಾತಿಗಳನ್ನು ವಶಕ್ಕೆ ನೀಡುವಂತೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರ ಆದೇಶದ ಮೇರೆಗೆ ಸಹಕಾರ ಇಲಾಖೆಯ ಹಿರಿಯ ಸಹಾಯಕ ಅಭಿವೃದ್ಧಿ ಅಧಿಕಾರಿ ಪದ್ಮನಾಭ, ಚಾಮರಾಜನಗರ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರಕಾಶ್, ಕೊಳ್ಳೇಗಾಲ ತಾಲ್ಲೂಕು ಸಹಾಯಕ ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗ ಮೂರ್ತಿ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಡನೆ ನಿನ್ನೆ ಸೊಸೈಟಿಯ ಪದಾಧಿಕಾರಿಗಳು, ನಿರ್ದೇಶಕರು, ಮುಖಂಡರ ನೇತೃತ್ವದಲ್ಲಿ ಲಾಕರ್ ಗಳ ಬೀಗ ತೆಗೆಸಿ ದಾಖಲಾತಿ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಲಾಕರ್, ಸೀಕ್ರೆಟ್ ಲಾಕರ್ ಹಾಗೂ ಅಲ್ಮೇರಗಳ ಬೀಗ ತೆಗೆದು ಅಲ್ಲಿದ್ದ ದಾಖಲಾತಿಗಳು, ಚೆಕ್ ಬುಕ್ ಗಳು ಹಾಗೂ 10 ಸಾವಿರ ರೂ ನಗದನ್ನು ವರ್ಷಕ್ಕೆ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷರಾದ ರಮೇಶ್ ಅವರು ನಮ್ಮ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಸಿಇಒ ನಾಗರಾಜು ಅವರು 2024-25ನೇ ಸಾಲಿನ ಲೆಕ್ಕ ಪರಿಶೋಧನೆ (ಆಡಿಟ್) ಮಾಡಿಸಿರಲಿಲ್ಲ ಹಾಗೂ ಲೆಕ್ಕಪರಿಶೋಧಕರಿಗೆ ಯಾವುದೇ ಸರಿಯಾದ ದಾಖಲಾತಿ ನೀಡಿರಲ್ಲಿಲ್ಲ, ಈ ಸಂಬಂಧ ಸಾಕಷ್ಟು ನೋಟಿಸ್ ನೀಡಲಾಗಿದ್ದರೂ ಯಾವುದೇ ಉತ್ತರ ಬರಲಿಲ್ಲ ಎಂದು ತಿಳಿಸಿದರು.
ಹಾಗಾಗಿ ಲೆಕ್ಕಪರಿಶೋಧನೆ ಮಾಡಿಸಬೇಕಿರುವ ಕಾರಣ ಸಹಕಾರ ನಿಬಂಧಕರನ್ನು ಆಡಿಟ್ ಮಾಡಿಸಲು ಸಹಕರಿಸಿ ಅನುಮತಿ ನೀಡುವಂತೆ ಕೋರಿದ್ದೆವು ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಹಿರಿಯ ಸಹಾಯಕ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಅವರನ್ನು ನೇಮಕ ಮಾಡಿ ದಾಖಲಾತಿಗಳನ್ನು ತೆಗೆದು ಕೊಳ್ಳಲು ಅನುಮತಿ ನೀಡಲಾಗಿದ್ದು ಹಿರಿಯ ಸಹಾಯಕ ಅಭಿವೃದ್ಧಿ ಅಧಿಕಾರಿ ಪದ್ಮನಾಭ, ಚಾಮರಾಜನಗರ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರಕಾಶ್ , ಕೊಳ್ಳೇಗಾಲ ತಾಲ್ಲೂಕು ಸಹಾಯಕ ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗ ಮೂರ್ತಿ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಡನೆ ನಮ್ಮ ಸೊಸೈಟಿಯ ಪದಾಧಿಕಾರಿಗಳು, ನಿರ್ದೇಶಕರು, ಮುಖಂಡರುಗಳ ನೇತೃತ್ವದಲ್ಲಿ ಲಾಕರ್ ಗಳ ಬೀಗ ತೆಗೆಸಿ ದಾಖಲಾತಿ ವಶಕ್ಕೆ ಪಡೆದಿದ್ದೇವೆ. ಈ ವೇಳೆ ಲಾಕರ್ ನಲ್ಲಿ ಸಾವಿರ ರೂ. ನಗದು ವರತುಪಡಿಸಿ ಚಿನ್ನ ಬೆಳ್ಳಿ ಇನ್ನಿತರ ಯಾವುದೇ ವಸ್ತುಗಳು ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇದರಿಂದಾಗಿ ನಮಗೆ 2024-25 ನೇ ಸಾಲಿನ ಲೆಕ್ಕಪರಿಶೋಧನೆ ಮಾಡಿಸಲು ಅನುಕೂಲವಾಗಲಿದೆ. ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಈ ವರದಿಯನ್ನು ಮಂಡಿಸಲಾಗುತ್ತದೆ. ಈಗಾಗಲೇ ಲೆಕ್ಕ ಪರಿಶೀಲನೆ ಮಾಡಿರುವ ಲೆಕ್ಕ ಪರಿಶೋಧಕರು ಮಧ್ಯಮ ವರದಿ ನೀಡಿದ್ದು 3.5 ಕೋಟಿ ಹಣ ದುರುಪಯೋಗ ವಾಗಿರುವುದನ್ನು ವರದಿಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ನಿರ್ದೇಶಕರಾದ ರಾಜಶೇಖರ್, ಶೇಖರ್, ಷಣ್ಮುಖಸ್ವಾಮಿ, ಎಸ್ ರವಿಕುಮಾರ್, ಎಂ ಕೆ ಪುಟ್ಟಸ್ವಾಮಿ, ಎಂ ಅನ್ನಪೂರ್ಣ, ಸಿ ಬಸವರಾಜ್, ಮಂಜುನಾಥ್, ಲೋಕೇಶ್ ಸೇರಿದಂತೆ ಬ್ಯಾಂಕ್ ನ ಸಿಬ್ಬಂದಿಕ ಹಾಜರಿದ್ದರು.
