ಮೈಸೂರು: ಭೂತಪ್ಪ ನವರ ಗರಡಿ ಪೈಲ್ವಾನ್, ದಕ್ಷಿಣ ಭಾರತದ ಹೆಸರಾಂತ ಕುಸ್ತಿ ಪಟು ಮೈಸೂರಿನ ಟೈಗರ್ ಬಾಲಾಜಿ ಅವರು ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ, ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟೌನ್ ಹಾಲ್ ಮುಂಭಾಗದ ಕಾವೇರಿ ಕ್ರಿಯಾ ಸಮಿತಿ ವೇದಿಕೆಯಲ್ಲಿ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರಾದ ಎಸ್ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಟೈಗರ್ ಬಾಲಾಜಿ ಅವರಿಗೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ಶೃಧ್ಧಾಂಜಲಿ ಸಭೆಯಲ್ಲಿ ತೇಜೇಶ್ ಲೋಕೇಶ್ ಗೌಡ, ಸಿಂದುವಳ್ಳಿ ಶಿವಕುಮಾರ್, ಕೃಷ್ಣಪ್ಪ, ನೇಹಾ, ಸುಜಾತಾ, ಮಹೇಶ್, ರಘು ಅರಸ್, ರವೀಶ್, ದರ್ಶನ್ ಗೌಡ, ಪ್ರದೀಪ್, ಹನುಮಂತಯ್ಯ ಮತ್ತಿತರರು ಪಾಲ್ಗೊಂಡು
ಟೈಗರ್ ಬಾಲಾಜಿ ಅವರ ಕಾರ್ಯಗಳನ್ನು ಸ್ಮರಿಸಿದರು.
