ಹುಣಸೂರು: ಬಡ ಜನರ ಜೀವರಕ್ಷಕ ವಾಗಿರುವ ಅಂಬುಲೆನ್ಸ್ಲ್ಲಿ ಹಣ ಪಾವತಿ ರಶೀದಿ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಿರುವುದು ಸರಿಯಷ್ಟೆ ಹುಣಸೂರು ತಾಲ್ಲೂಕಿನಲ್ಲಿ ಬಡ ಜನರು ಹಾಗೂ ಅತೀ ಹೆಚ್ಚು ಹಾಡಿಗಳ ಜನರಿದ್ದು ಅವರಿಗೆ ಶುಲ್ಕ ಕಟ್ಟುವುದು ಅಸಾಧ್ಯ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾ ಅದ್ಯಕ್ಷ ಚೆಲುವರಾಜು ಗಮನ ಸೆಳೆದಿದ್ದಾರೆ.
ಹುಣಸೂರಿನಲ್ಲಿ ಹಾಡಿಗಳು ಬಹಳಷ್ಟಿವೆ,ಹಾಗೆಯೇ ಆದಿವಾಸಿ ಬಡ ಕುಟುಂಬಗಳೂ ಇವೆ.ಇವರಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟು ತಮ್ಮ ಜೀವ ರಕ್ಷಣೆಗಾಗಿ ಅಂಬುಬೆನ್ಸ್ ಗೆ ಕರೆ ಮಾಡಿದರೆ 750 ರೂ ಶುಲ್ಕ ಪಾವತಿಸಿ ರಶೀದಿ ತೆಗೆದುಕೊಂಡು ಬಂದರೆ ಮಾತ್ರ ಅಂಬುಲೆನ್ಸ್ ಬರುತ್ತದೆ ಎಂದು ಕಡ್ಡಾಯ ಮಾಡಲಾಗಿದೆ.
ಇತ್ತ ರೋಗಿಗಳು ಜೀವನ್ಮರಣದ ನಡುವೆ ಹೋರಾಡುತ್ತಿದ್ದರೂ ಒಂದಿಷ್ಟೂ ಕನಿಕರಿಸದೇ ಅಂಬುಲೆನ್ಸ್ ಶುಲ್ಕ ಕಡ್ಡಾಯ ಮಾಡುತ್ತಿರುವ ಬಗ್ಗೆ ನಮ್ಮ ಕರ್ನಾಟಕ ಪ್ರಜಾಪಾರ್ಟಿ ರೈತಪರ್ವಕ್ಕೆ ಸಾರ್ವಜನಿಕರ ದೂರು ಬಂದಿವೆ ಎಂದು ಚೆಲುವರಾಜು ತಿಳಿಸಿದ್ದಾರೆ.
ಈ ಬಗ್ಗೆ ಶುಲ್ಕ ಪಾವತಿಸಿರುವ ಸ್ವೀಕೃತಿ ಪತ್ರವೂ ಸಹ ನಮ್ಮ ಬಳಿ ಲಭ್ಯವಿದೆ. ನಮ್ಮ ಪಕ್ಷದಿಂದ ಈ ಬಗ್ಗೆ ಪರಿಶೀಲಿಸಲಾಗಿ ಯಾವುದೇ ರೋಗಿಯು ಜೀವನ್ಮರಣದಲ್ಲಿ ಹೋರಾಡುತ್ತಿದ್ದರೂ 750 ರೂ ಪಾವತಿಸಲೇಬೇಕು. ಇಲ್ಲವಾದರೆ ಅಂಬುಲೆನ್ಸ್ ಹೊರಡುವುದೇ ಇಲ್ಲ ಇದು ಯಾವ ರೀತಿ ನ್ಯಾಯ ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.
ನಮ್ಮ ತಾಲ್ಲೂಕಿನಲ್ಲಿ 334 ಗ್ರಾಮಗಳ ಜನತೆ ಹುಣಸೂರಿನ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಚಿಕಿತ್ಸೆ ಪಡೆಯುವ ಉದ್ದೇಶಕ್ಕೆ ಬರುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಯೊಂದಕ್ಕೂ ಹಣ ನಿಗದಿಗೊಳಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಇರುವುದು ಬಡಜನರ ಸೇವೆಗೆ ಕಡು ಬಡವರು ಎಲ್ಲಿಂದ ಹಣ ತಂದಾರು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹೀಗೆ ಹಣ ಪಾವತಿಸಲೇ ಬೇಕೆಂಬ ಬಗ್ಗೆ ಯಾವ ಸರ್ಕಾರದ ಆದೇಶವಿದೆ ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಚೆಲುವರಾಜು ಒತ್ತಾಯಿಸಿದ್ದಾರೆ.
ಅಂಬುಲೆನ್ಸ್ ಗೆ 750 ರೂ ಪಾವತಿಸಲೇಬೇಕೆಂದು ಸರ್ಕಾರ ಆದೇಶ ಮಾಡಿದ್ದರೆ ಆ ಆದೇಶವನ್ನು ಸಾರ್ವಜನಿಕವಾಗಿ ದೊಡ್ಡ ಬೋರ್ಡಿನಲ್ಲಿ ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಂಬುಲೆನ್ಸ್ ಶುಲ್ಕದ ಅರಿವಿಲ್ಲದ ಬಡ ಕುಟುಂಬಗಳು ಜೀವನ್ಮರಣದ ಪರಿಸ್ಥಿತಿಯಲ್ಲಿ ಅಂಬುಲೆನ್ಸ್ ಗಾಗಿ ಬಂದರೆ ಹಣಕ್ಕಾಗಿ ಪರದಾಡುವಷ್ಟರಲ್ಲಿ ರೋಗಿಯ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಜನರ ಪರವಾಗಿ ಅವರು ಅಳಲು ತೋಡಿಕೊಂಡಿದ್ದಾರೆ.
ಅಂಬುಲೆನ್ಸ್ ಒಂದು ವೇಳೆ 750ರೂ ಶುಲ್ಕ ಕಡ್ಡಾಯಗೊಳಿಸಿದ್ದರೆ ತಾಲ್ಲೂಕಿನ ಬಡ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಶುಲ್ಕ ಕಡ್ಡಾಯ ಗೊಳಿಸಿರುವುದನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾ
ವತಿಯಿಂದ ವಿನಂತಿಸಿಕೊಳ್ಳುತ್ತೇನೆ. ತಪ್ಪಿದಲ್ಲಿ ಈ ವಿಚಾರವಾಗಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಂಡು ಸರ್ಕಾರದ ಸಚಿವರಿಗೆ, ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಚೆಲುವರಾಜು ಎಚ್ಚರಿಸಿದ್ದಾರೆ.
ಸರ್ಕಾರದ ಆದೇಶದಂತೆ ಈ ಕೆಳಕಂಡ ಮಾಹಿತಿಗಳನ್ನು ನೀಡಬೇಕೆಂದು ಅವರು ಕೋರಿದ್ದಾರೆ.
ಎಕ್ಸರೆ ಗೆ ಪಾವತಿಸಬೇಕಾದ ಶುಲ್ಕದ ಮಾಹಿತಿ,ವೈದ್ಯರ ಸಲಹೆ ಪಡೆಯಲು ರಶೀದಿ ಶುಲ್ಕದ ಮಾಹಿತಿ,
ಸರ್ಕಾರಿ ಆಸ್ಪತ್ರೆಯಿಂದ ಬಡ ಜನರು ಅಂಬುಲೆನ್ಸ್ ನಲ್ಲಿ ತೆರಳಲು ಪಡೆಯುತ್ತಿರುವ ಶುಲ್ಕದ ಮಾಹಿತಿ,ರಕ್ತ ಪರೀಕ್ಷೆಗೆ ನಿಗಧಿಗೊಳಿಸಿರುವ ಶುಲ್ಕದ ಮಾಹಿತಿ,
ಸ್ಕ್ಯಾನಿಂಗ್ ಗೆ ನಿಗಧಿಗೊಳಿಸಿರುವ ಶುಲ್ಕದ ಮಾಹಿತಿ,ಉಚಿತವಾಗಿ ನೀಡಲಾಗುವ ಚಿಕಿತ್ಸೆಗಳ ಬಗ್ಗೆ ಸರ್ಕಾರದ ಆದೇಶವಿದ್ದಲ್ಲಿ ಸಂಪೂರ್ಣ ಮಾಹಿತಿ ಮತ್ತು
ಸರ್ಕಾರದಿಂದ ಒಂದು ರೋಗಿಗೆ ಅಂಬುಲೆನ್ಸ್ ಗೆ ನಿಗದಿಗೊಳಿಸಿರುವ ಶುಲ್ಕದ ಮಾಹಿತಿ ಹಾಗೂ ಸದರಿ ಶುಲ್ಕ ಪಾವತಿಸಿಕೊಳ್ಳಲು ಆದೇಶದ ಮಾಹಿತಿ ನೀಡಬೇಕೆಂದು ಚೆಲುವರಾಜು ಕೋರಿದ್ದಾರೆ.
