ನವದೆಹಲಿ: ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ ಚಾಪ್ಟರ್ 1ಹಾಗೂ ಅನುಪಮ್ ಖೇರ್ ಅವರು ನಿರ್ದೇಶಿಸಿರುವ ತನ್ವಿ ದಿ ಗ್ರೇಟ್ ಚಲನಚಿತ್ರಗಳು ಆಸ್ಕರ್ ಪ್ರಶಸ್ತಿ ಕದ ತಟ್ಟಿವೆ.
201 ಸಿನಿಮಾಗಳು ಸ್ಪರ್ಧೆಯಲ್ಲಿವೆ ಇವುಗಳ ನಡುವೆ ಭಾರತೀಯ ಸಿನಿಮಾಗಳಿಗೆ ಪ್ರಶಸ್ತಿ ದಕ್ಕಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಜ.22ರಂದು ಅಧಿಕೃತ ನಾಮನಿರ್ದೇಶನಗಳ ಪಟ್ಟಿ ರಿಲೀಸ್ ಆಗಲಿದೆ, ಹಾಲಿವುಡ್ ಸಿನಿಮಾಗಳ ಜೊತೆ ನಮ್ಮ ಭಾರತೀಯ ನಿರ್ಮಾಣದ ಸಿನಿಮಾಗಳು ಸ್ಪರ್ಧಿಸಬೇಕಾಗಿದೆ.
ಆರ್ಆರ್ಆರ್ ಸಿನಿಮಾದ ʻನಾಟು ನಾಟುʼ ಹಾಡಿಗೆ ಆಸ್ಕರ್ ದಕ್ಕಿದ ನಂತರ ಯಾವುದೇ ಸಿನಿಮಾಕ್ಕೆ ಆಸ್ಕರ್ ಸಿಕ್ಕಿಲ್ಲ
ಕಾಂತಾರ ಚಾಪ್ಟರ್ 1 ಮತ್ತೆ ದೇಶ-ವಿದೇಶ ಮಟ್ಟದಲ್ಲಿ ಸುದ್ದಿಯಲ್ಲಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಸಿನಿಮಾ ಈ ವರ್ಷದ ಆಸ್ಕರ್ ಪ್ರಶಸ್ತಿಯ ರೇಸ್ನಲ್ಲಿ ಇದೆ.
98ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಗೆ ಪರಿಗಣಿಸಬಹುದಾದ ವಿಶ್ವದ 201 ಫೀಚರ್ ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಹಾಗೂ ಅನುಪಮ್ ಖೇರ್ ಅವರ ತನ್ವಿ ದಿ ಗ್ರೇಟ್ ಚಿತ್ರ ಲಿಸ್ಟ್ನಲ್ಲಿ ಇದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಸ್ಪಷ್ಟ ಪಡಿಸಿದೆ. ಎರಡೂ ಭಾರತೀಯ ಸಿನಿಮಾಗಳು ಅಕಾಡೆಮಿಯ ಹೆಚ್ಚುವರಿ ಅರ್ಹತಾ ಮಾನದಂಡಗಳನ್ನು ಪೂರೈಸಿವೆ ಎಂದು ತಿಳಿದುಬಂದಿದೆ.
