ಗೋಕಾಕ: ಕನ್ನಡ ಜಾನಪದ ಪರಿಷತ್ ಬೆಂಗಳೂರು 2026 ನೇ ಸಾಲಿನ ದಿನದರ್ಶಿಕೆಯನ್ನು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಶೂನ್ಯ ಸಂಪಾದನೆ ಮಠದ ಪೀಠಾಧ್ಯಕ್ಷರಾದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತದ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್ ಬಾಲಾಜಿ, ಮುಜರಾಯಿ ಇಲಾಖೆ ನಿವೃತ್ತ ಕಾರ್ಯನಿರ್ವಾಹ ಅಧಿಕಾರಿ ತೋಟಾರ್ ಗತ್ತಿ, ಹಿರಿಯ ಪಾರಿಜಾತ ಕಲಾವಿದರು ಈಶ್ವರ್ ಚಂದ್ರ ಬೆಟಿಗೇರಿ, ಯೋಗ ಗುರುಗಳಾದ ಆನಂದ್ ಸ್ವರಗಾವಿ, ಕನ್ನಡ ಜಾನಪದ ಪರಿಷತ್ ಧಾರಾವಾಡ ಜಿಲ್ಲಾ ಕಾರ್ಯದರ್ಶಿ ಸದಾನಂದ ಎಂ,ಯುವ ಘಟಕದ ಮಹಾಲಿಂಗ ಬಿಸನಕೊಪ್ಪ, ಮುತ್ತು, ಗಿರೀಶ್ ಉಪಸ್ಥಿತರಿದ್ದರು.
