ಮೈಸೂರು: ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕಬಿನಿಗೆ ಒಳಹರಿವು ಹೆಚ್ಚಾಗುತ್ತಿದೆ.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284.00 ಅಡಿ.ಇಂದು ನೀರಿನ ಮಟ್ಟ 2259.32 ಅಡಿ ದಾಖಲಾಗಿದೆ. ಕಳೆದ ವರ್ಷ ಇದೇ ದಿನ 2280.79 ಅಡಿ ನೀರಿತ್ತು.
ಜಲಾಶಯಕ್ಕೆ ಇಂದು 4394 ಕ್ಯೂಸೆಕ್ ಒಳಹರಿವು ಆಗುತ್ತಿದೆ. ಕಳೆದ ವರ್ಷ 14423 ಕ್ಯೂಸೆಕ್ ಒಳಹರಿವು ಇತ್ತು. ಜಲಾಶಯದಿಂದ ನದಿಗೆ 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ 11708 ಕ್ಯೂಸೆಕ್ ನೀರು ಹೊರಬಿಡಲಾಗಿತ್ತು.
ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಾಗೂ ಲಿಫ್ಟ್ ನೀರಾವರಿಗೆ ಇಂದು ನೀರು ಬಿಡುಗಡೆ ಮಾಡಿಲ್ಲ. ಒಟ್ಟು ಹೊರಹರಿವು 500 ಕ್ಯೂಸೆಕ್, ಆವಿಯಾಗುವಿಕೆಯಿಂದ 5.86 ಮಿಲಿಯನ್ ಘನ ಅಡಿ ನೀರು ನಷ್ಟವಾಗಿದೆ. ಜಲಾಶಯದ ಪ್ರದೇಶದಲ್ಲಿ 30 ಎಂಎಂ ಮಳೆಯಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
