ಮೈಸೂರು: ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ಮೈಸೂರಿನ ಯೋಗ ವಿಭಾಗದ ವತಿಯಿಂದ ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ 1ನೇ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್ಶಿಪ್ ಯಶಸ್ವಿಯಾಗಿ ನಡೆಯಿತು.
ಯೋಗಾಸನದ ಮೂಲಕ ದೈಹಿಕ ಸದೃಢತೆ, ಮಾನಸಿಕ ಕ್ಷೇಮ ಮತ್ತು ಏಕಾಗ್ರತೆ ಉತ್ತೇಜಿಸುವ ಉದ್ದೇಶದಿಂದ ಈ ಚಾಂಪಿಯನ್ಶಿಪ್ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ “Champion of Champions”, “Mysuru-Yogasana Shri” ಮತ್ತು “Yogasana Siri” ಬಿರುದುಗಳನ್ನು ನೀಡಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ JSS ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಡಿ. ನಾರಾಯಣಪ್ಪ, ಸರ್ಕಾರಿ ನೇಚರ್ ಕ್ಯೂರ್ & ಯೋಗ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ. ಡಿ. ಎಸ್. ಭರತೀಶ್, JSS AHERನ ಉಪ ಡೀನ್ ಡಾ. ಎಸ್. ಚಂದನ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಕೆ. ಜಿ. ದೇವರಾಜು ಉಪಸ್ಥಿತರಿದ್ದರು.
ವಿವಿಧ ವಿಭಾಗಗಳಲ್ಲಿ 52 ವಿಜೇತರಿಗೆ ಪ್ರಶಸ್ತಿ ಹಾಗೂ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಮಾರೋಪದಲ್ಲಿ ಪುರುಷರ ವಿಭಾಗದಲ್ಲಿ ಎಚ್. ಎಂ. ತನೂಷ್ ಅವರಿಗೆ “Yogasana Shri” ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮವನ್ನು ಯೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಂ. ಯು. ಸುಜನ್ ಮತ್ತು ಸಹಾಯಕ ಪ್ರಾಧ್ಯಾಪಕಿ ವಿ. ಎಂ. ಜಾಹ್ನವಿ ಸಂಯೋಜಿಸಿದರು.
