ಮೈಸೂರು: ಆಧುನಿಕ ಕರ್ನಾಟಕಕ್ಕೆ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆ ಅಪಾರ ಎಂದು ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಬಣ್ಣಿಸಿದರು.
ಮೈಸೂರಿನ ಹರ್ಡಿಂಜ್ ವೃತದ ಬಳಿ ಇರುವ ಮೈಸೂರು ಸಂಸ್ಥಾನದ 25ನೇ ಮಹಾರಾಜಾ ಶ್ರೀ ಜಯ ಚಾಮರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಜರ್ ಬಾದ್ ನಟರಾಜ್ ಮಾತನಾಡಿದರು
ಜಯಚಾಮರಾಜೇಂದ್ರ ಒಡೆಯರ್
ಅವರ ಕಾಲದಲ್ಲಿ ಶಿಕ್ಷಣ, ಉದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳು ಅಭಿವೃದ್ಧಿ ಹೊಂದಿದವು. ಕನ್ನಡದ ಏಕೀಕರಣಕ್ಕೆ ಮತ್ತು ಕನ್ನಡ ಭಾಷೆ, ವಿಶ್ವವಿದ್ಯಾಲಯಗಳನ್ನು ಪೋಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಪ್ರಜಾ ವಾತ್ಸಲ್ಯ ಕೊಡುಗೈ ದಾನಿ ದೂರದೃಷ್ಟಿಯ ನೇತಾರ, ದಕ್ಷ ಆಡಳಿತಗಾರ, ಸಾಹಿತ್ಯ-ಸಂಸ್ಕೃತಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕಾರ್ಯ ವೈಖರಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ನಜರಬಾದ್ ಲೋಕೇಶ್, ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರವಿಚಂದ್ರ, ಶಿವಲಿಂಗ ,ದಿನೇಶ್, ರಾಮಚಂದ್ರು, ಸೋಮಶೇಖರ್ ಆಚಾರ,
ನಿತಿನ್, ವಿಜಯ್, ಜೈ ಪ್ರಕಾಶ್ ಮತ್ತಿತರರು ಹಾಜರಿದ್ದರು.
