ಇಂಡೋನೇಷ್ಯಾ: ಇಂಡೋನೇಷ್ಯಾದ ಜಕಾರ್ತದಲ್ಲಿ ರೈಲುಗಳು ಮುಖಾಮುಖಿ ಡಿಕ್ಕಿ ಯಾದ ಪರಿಣಾಮ 14 ಪ್ರಯಾಣಿಕರು ಮೃತಪಟ್ಟಿದ್ದು,85 ಮಂದಿ ಗಾಯಗೊಂಡಿದ್ದಾರೆ.
ಅಪಘಾತದ ನಡೆದ ಬೆಕಾಸಿ ತಿಮೂರ್ ನಿಲ್ದಾಣದಲ್ಲಿ ರಕ್ಷಣಾ ಕಾರ್ಯ ಮುಕ್ತಾಯ ವಾಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಮುಖ್ಯಸ್ಥ ಮೊಹಮ್ಮದ್ ಸಯಾಫಿ ತಿಳಿಸಿದ್ದಾರೆ.
ಜಕಾರ್ತಾದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಬೆಕಾಸಿ ತೈಮೂರ್ ನಿಲ್ದಾಣದಲ್ಲಿ ರೈಲು ನಿಂತಿತು. ಈ ವೇಳೆ ರೈಲುಗಳ ಡಿಕ್ಕಿ ಸಂಭವಿಸಿದೆ.
ಲೆವೆಲ್ ಕ್ರಾಸಿಂಗ್ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಹಳಿಗಳ ಮೇಲೆ ನಿಂತಿತು. ಈ ಸಮಯದಲ್ಲಿ ದೀರ್ಘ ದೂರದಿಂದ ಬರುತ್ತಿದ್ದ ರೈಲು ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
