ವಾಷಿಂಗ್ಟನ್: ಇಷ್ಟು ದಿನ ತನ್ನ ನೆರೆಹೊರೆಯ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದ ಇರಾನ್ ಈಗ ಇನ್ನಷ್ಟು ಕೆರಳಿ ನೇರವಾಗಿ ಅಮೆರಿಕ ಬುಡವನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿದೆ.
ಸುಮಾರು 4,000 ಕಿಮೀ ದೂರದಲ್ಲಿರುವ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಬ್ರಿಟನ್ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ದಾಳಿ ಮಾಡಿದೆ.
ಇರಾನ್ ಇಷ್ಟು ದೂರದ ಗುರಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದು ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ.
ಇರಾನ್ ಹಿಂದೂ ಮಹಾಸಾಗರದ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಬ್ರಿಟನ್ ಜಂಟಿ ಮಿಲಿಟರಿ ನೆಲೆಯ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಹೇಳಿಕೊಂಡಿದೆ.
ಇರಾನ್ ಸುಮಾರು 4 ಸಾವಿರ ಕಿ.ಮೀ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದಂತೂ ನಿಜ. ಆದರೆ ಈ ಕ್ಷಿಪಣಿಗಳು ಇರಾನ್ ಪ್ರದೇಶದಿಂದ ಸುಮಾರು 2,500 ಮೈಲುಗಳು (4,000 ಕಿಲೋಮೀಟರ್) ದೂರದಲ್ಲಿರುವ ಗುರಿಯನ್ನು ತಲುಪಿಲ್ಲ,
ಇರಾನ್ ಹಾರಿಸಿದ 2 ಕ್ಷಿಪಣಿಗಳ ಪೈಕಿ ಒಂದು ಹಾರಾಟದಲ್ಲಿ ವಿಫಲವಾದರೆ, ಮತ್ತೊಂದನ್ನು ಅಮೆರಿಕ ನೌಕಾಪಡೆಯ ಯುದ್ಧನೌಕೆಯಿಂದ ಹಾರಿಸಿದ ಇಂಟರ್ಸೆಪ್ಟರ್ ಗುರಿಯಾಗಿಸಿಕೊಂಡು ದಾಳಿ ಮಾಡಿ ಅದನ್ನು ನಾಶ ಮಾಡಿತು. ಆದರೂ ಕ್ಷಿಪಣಿಯನ್ನು ಹೊಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ
