ಯುಎಇ: ಯುನೈಟೆಡ್ ಅರಬ್ ಎಮಿರೈಟ್ಸ್ ಬಂದರಿನಿಂದ ಹೊರಟ ಥಾಯ್-ಧ್ವಜದ ಕಾರ್ಗೋ ಹಡುಗಿನ ಮೇಲೆ ಬುಧವಾರ ಹಾರ್ಮುಜ್ ಜಲಸಂಧಿ ಬಳಿ ದಾಳಿ ನಡೆಸಲಾಗಿದೆ.
ಹಡಗಿನಲ್ಲಿದ್ದ ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದೆ.ಆದರೆ ಇನ್ನೂ ಮೂವರು ಪತ್ತೆಯಾಗಿಲ್ಲ ಎಂದು ರಾಯಲ್ ಥಾಯ್ ನೌಕಾಪಡೆ ತಿಳಿಸಿದೆ.
ಭಾರತದ ಕಾಂಡ್ಲಾ ಬಂದರಿಗೆ ಹೊರಟ್ಟಿದ್ದ ಥಾಯ್ ಕಂಪನಿಯ ಶಿಪ್ಪಿಂಗ್ ಕಂಪನಿ ಪಿಸಿಎಲ್ ಒಡೆತನದ ಮಯೂರಿ ನಾರೀ ಎಂಬ ಹಡಗು ಯುಎಇಯ ಖಲೀಫಾ ಬಂದರನ್ನು ಬಿಟ್ಟು ಹಾರ್ಮುಜ್ ಜಲಸಂಧಿ ಬಳಿ ಸಾಗುವಾಗ ದಾಳಿ ನಡೆಸಲಾಗಿದೆ.
ಈ ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ.
ರಾಯಲ್ ಥಾಯ್ ನೌಕಾಪಡೆಯು ಬಿಡುಗಡೆ ಮಾಡಿದ ಫೋಟೋಗಳಲ್ಲಿ ಹಡಗಿನಿಂದ ದಟ್ಟವಾದ ಕಪ್ಪು ಹೊಗೆ ಬರುತ್ತಿರುವುದನ್ನು ತೋರಿಸುತ್ತವೆ. ಹಡಗು ಸುತ್ತಮುತ್ತಲಿನ ನೀರಿನಲ್ಲಿ ಜೀವ ರಕ್ಷಕ ಸಾಧನಗಳು ಕೂಡಾ ಗೋಚರಿಸುತ್ತವೆ.
ದಾಳಿಗೆ ನಿರ್ದಿಷ್ಟ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರಾಯಲ್ ಥಾಯ್ ನೌಕಾಪಡೆ ಹೇಳಿದೆ.
