ನವದೆಹಲಿ: ಭಾರತದ ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಿರುವುದು ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ.
ಭಾರತದ ತೈಲ ಟ್ಯಾಂಕರ್ಗಳಿಗೆ ಮತ್ತು ಕಂಟೈನರ್ ಹಡಗುಗಳಿಗೆ ಹರ್ಮುಜ್ ಜಲಸಂಧಿ ಮೂಲಕ ಸಂಚರಿಸಲು ಇರಾನ್ ಒಪ್ಪಿಗೆ ನೀಡಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ಅವರ ನಡುವಿನ ಮಾತುಕತೆ ಫಲ ನೀಡಿದ್ದು, ಈ ಚರ್ಚೆ ನಂತರ ಇರಾನ್ ನಿಂದ ಅನುಮತಿ ಸಿಕ್ಕಿದೆ.
ತನ್ನ ಮೇಲೆ ಯುದ್ಧ ಸಾರಿದ್ದಕ್ಕೆ ಹಾರ್ಮುಜ್ ಜಲಸಂಧಿಯಯನ್ನು ಇರಾನ್ ಮುಚ್ಚಿದೆ. ಅಷ್ಟೇ ಅಲ್ಲದೇ ಅಮೆರಿಕ, ಇಸ್ರೇಲ್ ಮತ್ತು ಅದರ ಮಿತ್ರ ದೇಶಗಳ ತೈಲ ಟ್ಯಾಂಕರ್ ಗಳು ಹಾಗೂ ಹಡಗುಗಳು ಪ್ರವೇಶಿಸಿದರೆ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭಿಸಿದ ಮೂರನೇ ಬಾರಿ ಇಸ್ರೇಲ್ ಮತ್ತು ಭಾರತದ ನಾಯಕರು ಮಾತನಾಡಿದ್ದರು.
ಇರಾನ್ ಅನುಮತಿಯಿಂದ ದೇಶದಲ್ಲಿ ಉಂಟಾಗಿದ್ದ ಇಂಧನ ತೊಂದರೆ ನಿವಾರಣೆಯಾಗಲಿದೆ.
