ಮಂಡ್ಯ: ಜಿಲ್ಲೆಯ ಕಾರಾಗೃಹದಲ್ಲಿ ಗಾಂಜಾ ಹಾಗೂ ಮೊಬೈಲ್ ಪೂರೈಕೆ ಜಾಲವನ್ನು ಜೈಲಿನ ಅಧಿಕಾರಿಗಳೇ ಪತ್ತೆ ಹಚ್ಚಿದ್ದಾರೆ
ಖೈದಿಗೆ ಸಿನಿಮೀಯ ರೀತಿಯಲ್ಲಿ ಗಾಂಜಾ ಹಾಗೂ ಮೊಬೈಲ್ಅನ್ನು ತಲುಪಿಸುತ್ತಿದ್ದ ಕಿಲಾಡಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಸಿನಿಮೀಯ ಮಾದರಿ ಐಡಿಯಾ ಬಳಸಿ ಜೈಲಿನಲ್ಲಿ ಐಷರಾಮಿ ಜೀವನ ನಡೆಸುತ್ತಿದ್ದ ಖೈದಿಯ ಕಳ್ಳಾಟ ಸಿಸಿಟಿವಿ ಕ್ಯಾಮರಾದಿಂದ ಬಯಲಾಗಿದೆ.
ಜೈಲಿನ ಕಾಂಪೌಂಡ್ ಬಳಿ ಬೈಕ್ ನಲ್ಲಿ ಬಂದ ಇಬ್ಬರು ಪ್ಲಾಸ್ಟಿಕ್ ಸುತ್ತಿದ ಬಾಲ್ ಅನ್ನು ಕಾಂಪೌಂಡ್ ಒಳಗಡೆ ಎಸೆದಿದ್ದಾರೆ.
ಈ ಬಾಲನ್ನು ಖೈದಿ ತೆಗೆದುಕೊಂಡಿದ್ದಾನೆ. ಈ ಎಲ್ಲಾ ಚಲನವಲನಗಳನ್ನು ಜೈಲಾಧಿಕಾರಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಗಮನಿಸಿದ್ದಾರೆ.
ನಂತರ ನಾಗನ ಸೆಲ್ ಪರಿಶೀಲನೆ ನಡೆಸಿ ಬಾಲ್ ಓಪನ್ ಮಾಡಿದಾಗ ಹತ್ತು ಗ್ರಾಂ ಗಾಂಜಾ ಮತ್ತು ಒಂದು ಮೊಬೈಲ್ ಪತ್ತೆಯಾಗಿದ್ದು, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
