ಹುಣಸೂರು: ಹುಣಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಶುಕ್ರವಾರ ಒಂದು ರೀತಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಶಾಲೆಯಲ್ಲಿ ಮಕ್ಕಳು ಲೇಖನಿ ಸಾಮಗ್ರಿಗಳು,ಪುಸ್ತಕಗಳನ್ನು ಪಡೆದು ಖುಷಿ ಪಟ್ಟರು.

ಶಾಲಾ ಪೋಷಕರಾದ ಚಲುವರಾಜು ಹೊನ್ನಿಕೊಪ್ಪಲು ಅವರು ಕರ್ನಾಟಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ಗಳನ್ನು ವಿತರಿಸಿದರು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷರೂ ಆದ ಚಲುವರಾಜು ಅವರು ಇಂತಹ ಉತ್ತಮ ಕಾರ್ಯ ಮಾಡಿ ಮಾದರಿಯಾಗಿದ್ದಾರೆ.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಅವರು ಮಾತನಾಡಿ ಪುಸ್ತಕ,ಪೆನ್ನುಗಳನ್ನು ನೀಡಿದ ದಾನಿಗಳಾದ ಚಲುವರಾಜು ಹೊನ್ನಿಕೊಪ್ಪಲು ಅವರ ಕೊಡುಗೆಯನ್ನು ಶ್ಲಾಘಿಸಿದರು.

ಹುಣಸೂರು ನಗರಸಭಾ ಆಯುಕ್ತರಾದ ಮಾನಸ, ಅಬಕಾರಿ ಕಮೀಷನರ್ ಮೋಹನ್ ಕುಮಾರ್, ಇನ್ಸ್ಪೆಕ್ಟರ್ ಧರ್ಮರಾಜ್ ಅವರು ಉಪಸ್ಥಿತರಿದ್ದರು.

ನಂತರ ದಾನಿ ಚೆಲುವರಾಜು ಅವರನ್ನು ಶಾಲೆಯ ವತಿಯಿಂದ ಶಾಲು ಹೊದಿಸಿ ಹಾರಹಾಕಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಲಯನ ಟ್ರಸ್ಟ್ ವತಿಯಿಂದ ಕು.ಆಶ್ರಿತ ಮತ್ತು ಕು.ಪೂರ್ವಿ ಅವರು ಹಾವುಗಳು ಮತ್ತು ಅವುಗಳ ಉಪಯೋಗ ಕುರಿತು ಉಪನ್ಯಾಸ ನೀಡಿದರು.ಅಲ್ಲದೆ ರಸಪ್ರಶ್ನೆ ಕಾರ್ಯಕ್ರಮ ಕೂಡಾ ನಡೆಸಿಕೊಟ್ಟರು.

