ಮೈಸೂರು: ಜಿಲ್ಲೆಯ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ಧಿಢೀರ್ ಭೇಟಿ ನೀಡಿದ ರಕ್ಷಾ ಕಮಿಟಿ ಅಧ್ಯಕ್ಷರಾದ ನೇತ್ರಾವತಿ ಅವರು ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.
ಅವ್ಯವಸ್ಥೆ ದೂರುಗಳು ಬಂದ ಹಿನ್ನಲೆ ನೇತ್ರಾವತಿ ಅವರು ಈ ಸಾರ್ವಜನಿಕ ಆಸ್ಪತ್ರೆಗೆ ಧಿಢೀರ್ ಭೇಟಿ ನೀಡಿ ಪರಿಶೀಲಿ ಸಿದರು.
ಆಸಗತ್ರೆಗೆ ಬರುತ್ತಿದ್ದಾಗಲೇ ಸ್ವಚ್ಛತೆ ಇಲ್ಕದ್ದು ಕಂಡುಬಂದಿತು.ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರ ಕೊರತೆ ಎದ್ದುಕಾಣುತಿತ್ತು.
ಚಿಕಿತ್ಸೆಗಾಗಿ ರೋಗಿಗಳು ಸರದಿಯಲ್ಲಿ ಕಾದುನಂತಿದ್ದರು.ಕುಡಿಯುವ ನೀರು ಇಲ್ಲದೆ ರೋಗಿಗಳು ತೊಂದರೆ ಅನುಭವಿಸುತ್ತಿದ್ದರು.
ಖಾಲಿ ನೀರಿನ ಬಾಟಲ್ ಗಳು ಸಿಬ್ಬಂದಿಗಳ ನಿರ್ಲಕ್ಷ್ಯತೆಯನ್ನು ಎತ್ತಿ ತೋರುವಂತಿತ್ತು.
ಈ ಎಲ್ಲಾ ಅವ್ಯವಸ್ಥೆಯನ್ನ ಕಂಡ ಅಧ್ಯಕ್ಷರು ಸಿಬ್ಬಂದಿಗಳಿಗೆ ಚಳಿ ಬಿಡಿಸಿದರು ಈ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದರು.

