ಹುಣಸೂರು: ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯನ್ನು ಹಿಂದೆ ಮುಖ್ಯಮಂತ್ರಿಗಳಾಗಿದ್ದ ಡಿ ದೇವರಾಜ ಅರಸು ಅವರು ಕಟ್ಟಿಸಿದ್ದರು, ಈ ಆಸ್ಪತ್ರೆ ಚೆನ್ನಾಗಿಯೇ ನಡೆಯುತ್ತಿದೆ,ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಬಣ್ಣ ಮಾಸಿ ಹಾಳಾಗಿತ್ತು,ಗೋಡೆಗಳು ಶಿಥಿಲಾವಸ್ತೆಗೆ ತಲುಪಿದ್ದವು.
ಈ ಬಗ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದರು.
ಈ ಸರ್ಕಾರಿ ಆಸ್ಪತ್ರೆ ಕುರಿತು ವರ್ಷಿಣಿ ನ್ಯೂಸ್ ಸವಿವರ ನೀಡಿ ಪ್ರಕಟಿಸಿತ್ತು.ಇದರ ಫಲಾವಾಗಿ ಎಚ್ಚೆತ್ತ ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆಯ ಅಭಿವೃದ್ಧಿಗೆ 52 ಲಕ್ಷ ರೂಪಾಯಿ ಸ್ಯಾಂಕ್ಷನ್ ಮಾಡಿದ್ದಾರೆ ಎಂದು ಚೆಲುವರಾಜು ತಿಳಿಸಿದ್ದಾರೆ.
ಆದರೆ ಈ ಹಣವನ್ನು ಸರಿಯಾಗಿ ಬಳಕೆ ಮಾಡಲಿಲ್ಲ.ಗುಣಮಟ್ಟದ ಕಾಮಗಾರಿ ಆದಂತೆ ಕಾಣುತ್ತಿಲ್ಲ,ಇನ್ನೂ ಕೆಲಸ ಬಾಕಿ ಇದೆ.ಅಲ್ಲದೆ ಆಸ್ಪತ್ರೆಯ ಮುಂಭಾಗದ ಗೋಡೆಗೆ ಗಾಢ ಹಸಿರು ಬಣ್ಣ ಹಚ್ಚಿದ್ದಾರೆ.
ಯಾವುದೇ ಸರ್ಕಾರಿ ಆಸ್ಪತ್ರೆಗೆ ಈ ರೀತಿಯ ಗಾಡ ಹಸಿರು ಬಣ್ಣ ಬಳಿಯುವುದೇ ಇಲ್ಲಾ. ತಿಳಿಯಾದ ಬಿಳಿ ಬಣ್ಣ ಅಥವಾ ತಿಳಿ ಕೆನೆ ಬಣ್ಣ ಹಚ್ಚುತ್ತಾರೆ. ಆದರೆ ಈ ಆಸ್ಪತ್ರೆಗೆ ಗಾಡಹಸಿರು ಬಣ್ಣ ಬಳಿದಿದ್ದು ಕೆಟ್ಟದಾಗಿ ಕಾಣುತ್ತದೆ ಎಂದು ಚೆಲುವರಾಜು ಆರೋಪಿಸಿದ್ದಾರೆ.
ಕೂಡಲೇ ಗುಣಮಟ್ಟದ ಕಾಮಗಾರಿ ಮಾಡಬೇಕು, ಶಿಥಿಲವಾಗಿರುವ ಬಾಗಿಲು ಕಿಟಕಿಗಳನ್ನು ಸರಿಪಡಿಸಬೇಕು ಮತ್ತು ಗಾಢ ಹಸಿರು ಬಣ್ಣವನ್ನು ತಕ್ಷಣ ತೆಗೆದು ತಿಳಿ ಬಿಳಿಯ ಬಣ್ಣ ಅಥವಾ ಕೆನೆ ಬಣ್ಣ ಬಳಿಯಬೇಕು ಎಂದು ಅವರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಕಳಪೆ ಕಾಮಗಾರಿ ಮಾಡಿರುವ ಕಂಟ್ರಾಕ್ಟರ್ ಮತ್ತು ಇಂಜಿನಿಯರ್ ಅವರನ್ನು ಕರೆಸಿ ಪ್ರಶ್ನಿಸಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಸಚಿವರು ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡುವುದಾಗಿ ಚೆಲುವರಾಜು ಎಚ್ಚರಿಸಿದ್ದಾರೆ.
ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಯನ್ನು ಸಂಬಂಧಪಟ್ಟ ಸಚಿವರು, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಗಮನಿಸದೇ ಹೋದದ್ದು ನಿಜಕ್ಕೂ ವಿಷಾದನೀಯ.
