ಮೈಸೂರು: ಕುಂಚಿಟಿಗ ಸಮಾಜದ ಹೆಮ್ಮೆಯ ಪುತ್ರ ಧರ್ಮಪ್ರಕಾಶ ರಾವ್-ಬಹದ್ದೂರ್ ಡಿ ಬನುಮಯ್ಯನವರ
ನೆನಪಿನಲ್ಲಿ ಸೇವಾ ಕಾರ್ಯ ಪ್ರಾರಂಭಿಸಲಾಗಿದೆ.
ಬೇಸಿಗೆಯ ಬಿರು ಬಿಸಿಲಿನಲಿ ಸಾರ್ವಜನಿಕರಿಗಾಗಿ ಇದೇ ಬುಧವಾರದಿಂದ ಪ್ರತಿ ದಿವಸ 12 ಗಂಟೆಗೆ ಮೂರು ತಿಂಗಳ ತನಕ ಕುಡಿಯುವುದಕ್ಕೆ ಉಚಿತವಾಗಿ ನೀರು ಮಜ್ಜಿಗೆ ಕೊಡುವ ಅರವಟಿಗೆ ಧರ್ಮವನ್ನು ನಡೆಸಲಾಗುತ್ತಿದೆ.
ಪ್ರವೀಣ್ ಬನುಮಯ್ಯ ಅವರು ಈ ಸೇವಾಕಾರ್ಯ ಹಮ್ಮಿಕೊಂಡಿದ್ದು, ಡಿ.ಬನುಮಯ್ಯ ಚೌಕದಲ್ಲಿ ಬೆಳಿಗ್ಗೆ ಚಾಲನೆ ನೀಡಲಾಯಿತು.
