ಮೈಸೂರು: ಹೊಯ್ಸಳ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರು ಮತ್ತು ಬ್ರಾಹ್ಮಣ ಧರ್ಮ ಸಹಾಯ ಸಭಾದ ಮಾಜಿ ಅಧ್ಯಕ್ಷರು ಸಹಕಾರಿ ಧುರೀಣರು ನಿವೃತ್ತ ರೇಲ್ವೆ ನೌಕರರಾದ ಮಂಜುನಾಥ್ ಅವರು ವಯೋಸಹಜ ಕಾಯಿಲೆ ಯಿಂದ ಮೃತಪಟ್ಟಿದ್ದಾರೆ.
ಅವರಿಗೆ 96 ವರ್ಷ ವಯಸ್ಸಾಗಿತ್ತು. ಅಂತಿಮ ದರ್ಶನಕ್ಕೆ ಹೊಯ್ಸಳ ಕರ್ನಾಟಕ ಸಂಘದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ನಂತರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತಿಮ ಕಾರ್ಯ ನಡೆಸಲಾಯಿತು.
ಮಂಜುನಾಥ್ ಅವರ ನಿಧನಕ್ಕೆ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ. ಆರ್. ಸತ್ಯನಾರಾಯಣ, ಕಾರ್ಯಕಾರಿ ಮಂಡಳಿ ಯ ಶoಕರನಾರಾಯಣ ಜಯಸಿಂಹ, ಸುಂದರಮೂರ್ತಿ, ವಿಜಯ್ ಕುಮಾರ್, ಡಾ. ವಿದ್ಯಾಶಂಕರ್, ಅನುಪಮಾ ಅವರು ಸಂತಾಪ ಸೂಚಿಸಿದ್ದಾರೆ.
