ಹುಣಸೂರು: ಸರ್ಕಾರಗಳು ಎಸ್ಐಆರ್ ಮಾಡ್ತಾ ಇರೋದು ಸರೀನೇ,ಆದರೆ ಇದರ ಕಾರ್ಯಕ್ಕೆ ನೇಮಿಸಿರೋ ಬಿಎಲ್ಒ ಗಳ ಪಾಡು ಹೇಳತೀರದು.
ಕೇವಲ ಒಂದು ತಿಂಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಮುಗಿಯಬೇಕೆಂದು ಸರ್ಕಾರ ಸುಮಯ ನಿಗದಿಪಡಿಸಿದೆ.ಹಾಗಾಗಿ ಮಳೆ ಇರಲಿ,ಬಿಸಿಲಿರಲಿ,ಅನಾರೋಗ್ಯವೇ ಇರಲಿ ಬಿಎಲ್ಒ ಮನೆ ಮನೆಗೆ ತೆರಳಿ ಎಸ್ಐಆರ್ ಪ್ರಕ್ತಿಯೆ ಮುಗಿಸಬೇಕಿದೆ.
ಇಂತಹ ಪರಿಸ್ಥಿತಿ ಒಂದು ಕಡೆಯಲ್ಲ,ರಾಜ್ಯಾದ್ಯಂತ ಎಲ್ಲಾ ಕಡೆ ಇದೇ ಪರಿಸ್ಥಿತಿ ಇದೆ.ಇದಕ್ಕೆ ಹುಣಸೂರಿನಲ್ಲಿ ಒಂದು ಉದಾಹರಣೆ ಇದೆ.
ಹುಣಸೂರು ತಾಲೂಕು ಹೊನ್ನೆಕುಪ್ಪೆ ಗ್ರಾಮದಲ್ಲಿ ಬಿ ಎಲ್ ಒ ಆಗಿ ರಮೇಶ್ ಎಂ.ಕೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅವರನ್ನು ನೋಡಿಕೊಳ್ಳುವವರು ಬೇರೆ ಯಾರೂ ಇಲ್ಲ. ಆದರೆ ಅನಿವಾರ್ಯ, ರಮೇಶ ಅವರು ತಾಯಿಯನ್ನು ನೋಡಲು ಸಾಧ್ಯವಾಗದೆ ಪರಿತಪಿಸುತ್ತಲೇ ಎಸ್ಐಆರ್ ಪ್ರಕ್ರಿಯೆಗೆ ಹಾಜರಾಗಲೇ ಬೇಕಿದೆ.
ಈ ಬಗ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ್ದು ಸರ್ಕಾರ ಎಸ್ಐಆರ್ ಮಾಡುತ್ತಿರುವುದು ಒಳ್ಳೆಯದೇ, ನಾವು ಇದನ್ನು ಸ್ವಾಗತಿಸುತ್ತೇವೆ ಆದರೆ ಬಿ ಎಲ್ ಒ ಕಷ್ಟವನ್ನು ಹೇಳಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಬ್ಬರೇ ಬಿಎಲ್ಒ ಅಷ್ಟೊಂದು ಮನೆಗಳನ್ನು ತಲುಪಿ ಎಸ್ಎಆರ್ ಫಾರಂ ಗಳನ್ನು ವಿತರಿಸಿ ಮತ್ತೆ ಪಡೆದುಕೊಳ್ಳಬೇಕಿದೆ ಇದು ಒಂದು ತಿಂಗಳಲ್ಲಿ ಮುಗಿಯುವ ಕೆಲಸವಲ್ಲ. ಒಬ್ಬರೇ ಬಿಎಲ್ಒ ಫಾರಂ ಕೊಟ್ಟು ಗ್ರಾಮಸ್ಥರಿಂದ ದಾಖಲೆ ಪಡೆದು ಪರಿಶೀಲಿಸಿ,ಮಾಹಿತಿ ಕಲೆಹಾಕಿ ಭರ್ತಿ ಮಾಡಿಸಬೇಕು.ಎಷ್ಟೋ ಜನರಿಗೆ ಓದು ಬರಹ ಗೊತ್ತಿಲ್ಲ.ಆಗ ಆ ಕೆಲಸವನ್ನೂ ಬಿಎಲ್ಒ ಮಾಡಬೇಕಿದೆ.
ಒಂದು ವೇಳೆ ಅವರಿಗೆ ಅನಾರೋಗ್ಯವಾದರೆ ಕೇಳುವವರು ಯಾರು ಇಲ್ಲದಂತಾಗಿದೆ. ಸರ್ಕಾರ ಮೊದಲು ಬಿಎಲ್ಒ ಜೊತೆಗೆ ಬೇರೊಬ್ಬರನ್ನು ಸಹಾಯಕರಾಗಿ ತುರ್ತಾಗಿ ನೇಮಿಸಲೇಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.
ಹೊನ್ನಿಕುಪ್ಪೆಗೆ ನೇಮಿಸಿರುವ ಬಿ ಎಲ್ಒ ರಮೇಶ ಅವರ ತಾಯಿ ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳುವುದು ರಮೇಶ್ ಅವರ ಕರ್ತವ್ಯ, ಆದರೆ ಸರ್ಕಾರದ ಕೆಲಸಕ್ಕಾಗಿ ಪ್ರತಿದಿನ ತಾಯಿಯ ಆರೋಗ್ಯವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದಾರೆ. ಇದನ್ನು ಕೇಳಿ ನಮಗೆ ತುಂಬಾ ಅಯ್ಯೋ ಅನಿಸುತ್ತಿದೆ ಸರ್ಕಾರ ಮೊದಲು ಸಹಾಯಕರನ್ನು ನೇಮಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
