ಮೈಸೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಚುನಾವಣಾ ಭಾಷಣವೊಂದರಲ್ಲಿ ಬಿಜೆಪಿ ಮತ್ತು ಆರ್ ಎಸ್ಎಸ್ ಅನ್ನು ವಿಷಪೂರಿತ ಹಾವಿಗೆ ಹೋಲಿಸಿ ಅದನ್ನು ಸಾಯಿಸುವುದು ಪ್ರತಿಯೋರ್ವರ ಧರ್ಮವಾಗಿದೆ ಎಂದು ಹೇಳಿರುವುದನ್ನು ಬಿಜೆಪಿ ಮುಖಂಡರಾದ ಡಾ. ಹೇಮಾನಂದೀಶ್ ಅವರು ಖಂಡಿಸಿದ್ದಾರೆ.
ರಾಜಕಾರಣವನ್ನೇ ತಮ್ಮ ಕಸುಬಾಗಿಸಿಕೊಂಡಿರುವ ಹಿರಿಯ ಕಾಂಗ್ರೆಸಿಗ ಖರ್ಗೆ ಅವರು ನಕಲಿ ಗಾಂಧಿಗಳ ಕುಟುಂಬವನ್ನು ಮೆಚ್ಚಿಸುವುದಕ್ಕಾಗಿ ಅಲ್ಪಸಂಖ್ಯಾತರೇ ಸೇರಿರುವ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಮುಸಲ್ಮಾನರು ನಮಾಜ್ ಮಾಡುವಾಗ ಅಲ್ಲಿ ಹಾವೊಂದು ಪ್ರತ್ಯಕ್ಷವಾದರೆ, ನಮಾಜನ್ನು ನಿಲ್ಲಿಸಿ ಹಾವನ್ನು ಕೊಲ್ಲಬೇಕೆಂದು ಕುರಾನ್ ಹೇಳಿದೆ. ಅದೇ ರೀತಿ ಈ ಬಿಜೆಪಿ ಮತ್ತು ಆರ್ಎಎಸ್ ಕೂಡ ಈ ಹಾವಿನ ರೀತಿಯಲ್ಲಿದ್ದು, ಅದನ್ನು ಸಾಯಿಸುವುದು
ನಮ್ಮ ಅದ್ಯ ಕರ್ತವ್ಯವಾಗಬೇಕು ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ, ಖರ್ಗೆಯವರ ಮಾನಸಿಕತೆ ಎಂತಹ ದ್ವೇಷಪೂರಿತವಾಗಿದೆ ಎಂಬುದನ್ನು ದೇಶದ ಜನತೆ ಆರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಡಾಕ್ಟರ್ ಹೇಮಾನಂದೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಖರ್ಗೆಯವರ ಈ ಪ್ರಚೋದನಾಕಾರಿ ಭಾಷಣ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಅಗಿದ್ದು,ಖರ್ಗೆಯವರ ಈ ಹೇಳಿಕೆ ಸಂವಿಧಾನ ವಿರೋಧವಾಗಿದೆ, ಪ್ರಚೋದನಾಕಾರಿ ಹೇಳಿಕೆಯ ಹಿನ್ನಲೆಯಲ್ಲಿ ಅವರ ವಿರುದ್ಧ ಸೋಮೊಟೋ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು, ಬಿಜೆಪಿ ರಾಜ್ಯಾಧ್ಯಕ್ಷರು ತಕ್ಷಣ ಕಾರ್ಯಕಾರಿ ಸಮಿತಿ ಸಭೆ ಕರೆದು ಅವರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ಹೇಮಾ ಅವರು ಒತ್ತಾಯಿಸಿದ್ದಾರೆ.
