ಹನೂರು: ಹನೂರು ತಾಲೂಕಿನ ಬಿ.ಆರ್.ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಲೊಕ್ಕನಹಳ್ಳಿ ಸಮೀಪ ಗುಡ್ಡದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು 20 ಎಕರೆಗೂ ಹೆಚ್ಚು ಆರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.
ಗುರುವಾರ ಮಧ್ಯಾಹ್ನ ಲೊಕ್ಕನಹಳ್ಳಿ ಸಮೀಪದ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡು ಎಕರೆಗಟ್ಟಲೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿ ಸುಟ್ಟು ಹೋಗಿದೆ.
ಅರಣ್ಯಕ್ಕೆ ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ವಲಯ ಅರಣ್ಯ ಅಧಿಕಾರಿ ವಾಸು ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವಾರ ಬಿ.ಆರ್.ಟಿ ವಲಯ ವ್ಯಾಪ್ತಿಯ ಬೈಲೂರು ಅರಣ್ಯ ಪ್ರದೇಶದಲ್ಲಿ 80 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು.
ಇದೀಗ ಮತ್ತೆ ಬಿ.ಆರ್.ಟಿ ವಲಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಇದು ಕಿಡಿಗೇಡಿಗಳು ಹಾಕಿರುವ ಬೆಂಕಿಯೋ ಅಥವಾ ಕಾಡ್ಗಿಚ್ಚಿಗೆ ಬಿದ್ದಿರುವ ಬೆಂಕಿಯೋ ಎಂಬ ಅನುಮಾನ ಕಾಡುತ್ತಿದೆ.ಏನೇ ಆಗಲಿ ಅಮೂಲ್ಯ ಗಿಡಗಳು ನಾಶವಾಗುತ್ತಿದೆ.
ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯಕ್ಕೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
w
