ಮೈಸೂರು: ಶ್ರೀ ಹನುಮಾನ್ ಚಾಲೀಸ್ ಪಾರಾಯಣ ಮಹಾಯಜ್ಞ ಫೆ 14 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಚಾಮರಾಜ ಕ್ಷೇತ್ರದ 23ನೇ ವಾರ್ಡಿನ ಗಾಣಿಗರಬೀದಿ ಸುತ್ತಮುತ ಮನೆ ಮನೆಗೆ ತೆರಳಿ ಆಹ್ವಾನ ಪತ್ರ ನೀಡಿ ಆಹ್ವಾನಿಸಲಾಯಿತು.
ಶ್ರೀ ಹನುಮಾನ್ ಚಾಲೀಸ ಪಾರಾಯಣ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಭಕ್ತವೃಂದ
ಮನವಿ ಮಾಡಿತು.
ಈ ಸಂದರ್ಭದಲ್ಲಿ ವಾರ್ಡ್ ನಂಬರ್ 23 ರ ಬಿಜೆಪಿ ಮುಖಂಡರಾದ ಆರ್ ಪರಮೇಶ್ ಗೌಡ, ಪ್ರದೀಪ್ ಕುಮಾರ್, ಬ್ರಹ್ಮಚಾರ್, ಪ್ರಮೋದ್, ಟಿ ಎಸ್ ಅರುಣ್, ವಿ ಎಸ್ ಕಿರಣ್, ಗ್ಯಾರೇಜ್ ರಮೇಶಣ್ಣ, ಅಭಿಷೇಕ್ ಗೌಡ, ದೀಪು, ಸ್ವಾಮಿ, ಮೋಹನ್, ನಾಗೇಶ್ ಯಾದವ್ ಮತ್ತಿತರರು ಮನೆಗಳಿಗೆ ತೆರಳಿ ಶ್ರೀ ಹನುಮಾನ್ ಚಾಲೀಸ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು.
